LATEST NEWS
ರಜನಿಕಾಂತ್ ವಿರುದ್ಧ ಹೈಕೋರ್ಟ್ ಗರಂ…!?
ಚೆನ್ನೈ: ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್ ಅನ್ನು ಪ್ರಶ್ನಿಸಿ ಚಿತ್ರನಟ ರಜನಿಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನಿಕಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪ ವಿದ್ದು, ಅದರ ತೆರಿಗೆ ಹಣವನ್ನು ಕಟ್ಟುವಂತೆ ಜಾರಿ ಮಾಡಲಾಗಿದೆ ನೋಟಿಸನ್ನು ಅವರು ಪ್ರಸಿದ್ದರು.
ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಅರ್ಧ ವರ್ಷದ ತೆರಿಗೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ ಲಾಕ್‌ಡೌನ್ ಹಾಗೂ ಕರೊನಾ ವೈರಸ್ ಕಾರಣ ನೀಡಿದ್ದ ರಜನಿಕಾಂತ್, ಈ ಅವಧಿಯಲ್ಲಿ ಯಾವುದೇ ಆದಾಯ ಇಲ್ಲ, ಆದ್ದರಿಂದ ತೆರಿಗೆ ಕಟ್ಟುವುದು ಕಷ್ಟ ಎಂದು ಕೋರ್ಟ್‌ಗೆ ತಿಳಿಸಿದ್ದರು. ಕೊನೆಯದಾಗಿ ಫೆಬ್ರವರಿ 14 ರಂದು ತೆರೆಗೆ ಪಾವತಿಸಲಾಗಿದೆ. ಲಾಕ್‌ಡೌನ್‌ಗೂ ಮೊದಲು ಹಾಲ್ ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ಮರುಪಾವತಿ ಸಿದ್ದೇವೆ. ನಂತರ ತೆರಿಗೆ ಕಟ್ಟುವುದು ಕಷ್ಟವಾಗುತ್ತದೆ ಎಂದಿದ್ದರು.
ಅವರ ಅರ್ಜಿ ನ್ಯಾಯಮೂರ್ತಿ ಅನಿತಾ ಸುಮಂತ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಅದನ್ನು ವಾಪಸ್ ಪಡೆದುಕೊಳ್ಳಿ, ಇಲ್ಲವೇ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗುವುದು ಎಂದು ರಜನಿಕಾಂತ್ ಪರ ವಕೀಲರಿಗೆ ಎಚ್ಚರಿಕೆ ನೀಡಿತು.
ನೋಟಿಸ್‌ಗೆ ಸಂಬಂಧಿಸಿದಂತೆ ಪಾಲಿಕೆಗೆ ಉತ್ತರಿಸುವುದನ್ನು ಬಿಟ್ಟು ನೋಟಿಸ್ ಕೊಟ್ಟು 10 ದಿನದೊಳಗೇ ಕೋರ್ಟ್‌ಗೆ ಬಂದಿರುವುದಕ್ಕೆ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ರಜನಿಕಾಂತ್ ಪರ ವಕೀಲರು ಹಿಂದಕ್ಕೆ ಪಡೆದರು.