MANGALORE
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಎಸ್ ಡಿಪಿಐ ವತಿಯಿಂದ ಜಾಗೋ ಕಿಸಾನ್ ಅಭಿಯಾನ
ಮಂಗಳೂರು ಅಕ್ಟೋಬರ್ 14: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿರುವ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದೇಶವ್ಯಾಪಿ ಅಕ್ಟೋಬರ್ ತಿಂಗಳಿನಲ್ಲಿ “ಜಾಗೋ ಕಿಸಾನ್” ಕೃಷಿ ಸಂಹಾರ ಬಿಜೆಪಿಯ ಹುನ್ನಾರ ಎಂಬ ಹೆಸರಿನಲ್ಲಿ ಅಭಿಯಾನ ಕೈಗೊಂಡಿದೆ.
ಈ ಹಿನ್ನಲೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿತ್ತಿಪತ್ರ ಅಂಟಿಸುವುದು, ಕರಪತ್ರ ವಿತರಣೆ, ರೈತ ಮತ್ತು ಸಮಾನಮನಸ್ಕ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನಾ ಸಭೆ, ಪಾದಯಾತ್ರೆ, ಕಾರ್ನರ್ ಮೀಟ್,ಮಾನವ ಸರಪಳಿ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮ ಕಡಬ ತಾಲೂಕಿನ ಕೊಂಬಾರ್ ಗ್ರಾಮದ ಗದ್ದೆಯಲ್ಲಿ ವಿಭಿನ್ನ ರೀತಿಯಲ್ಲಿ ನಡೆಯಲಿದೆ ಎಂದು ಜಾಗೋ ಕಿಸಾನ್ ಅಭಿಯಾನದ ಜಿಲ್ಲಾ ಉಸ್ತುವಾರಿ ಆಂಟನಿ.ಪಿಡಿ ತಿಳಿಸಿದ್ದಾರೆ. ಈ ಅಭಿಯಾನವು ಅಕ್ಟೋಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾದ್ಯಂತ ನಾನಾ ಕಡೆಗಳಲ್ಲಿ ಮಾನವ ಸರಪಳಿ ನಡೆಸುವ ಮೂಲಕ ಸಮಾಪ್ತಿಗೊಳ್ಳಲಿದೆ.
Facebook Comments
You may like
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
-
ಖಾಸಗಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಆರೆಸ್ಟ್ – ಪೊಲೀಸರ ಎದುರೇ ಕಪಾಳಕ್ಕೆ ಬಾರಿಸಿದ ಯುವತಿ
-
ಆರ್ಥಿಕ ಮುಗ್ಗಟ್ಟಿಗೆ ಯವ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ
-
ನೂತನ ಸಚಿವರಿಗೆ ಖಾತೆ ಹಂಚಿಕೆ..ನೂತನ ಸಚಿವ ಅಂಗಾರರಿಗೆ ಮೀನುಗಾರಿಕೆ
You must be logged in to post a comment Login