KARNATAKA
ಮಡಿಕೇರಿ : ಹನಿಟ್ರ್ಯಾಪ್ ಗೆ ಸಿಲುಕಿದ ನಿವೃತ್ತ ಯೋಧನಿಂದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ..!
ಮಡಿಕೇರಿ : ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಹನಿಟ್ರ್ಯಾಪ್ ನಲ್ಲಿ ಸಿಲುಕಿ ಯುವತಿಯ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತು ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ಸಂಭವಿಸಿದೆ.
ಈತನನ್ನು ಪ್ರೀತಿಯ ನಾಟಕವಾಡಿ ಬಲೆಗೆ ಕೆಡವಿ ಹನಿಟ್ರ್ಯಾಪ್ ಮಾಡಿದ ಯುವತಿಯನ್ನು ಜೀವಿತಾ ಎಂದು ಗುರುತಿಸಲಾಗಿದೆ.ಮಡಿಕೇರಿ ನಗರದ ಉಕ್ಕುಡ ನಿವಾಸಿ ಸಂದೇಶ್ (38) ನಾಪತ್ತೆಯಾದ ನಿವೃತ್ತ ಯೋಧ. ಜೀವಿತಾ ಎಂಬ ಮಹಿಳೆ ವಿರುದ್ಧ ಸಂದೇಶ್ ಆರೋಪ ಮಾಡಿದ್ದಾರೆ. ಮದುವೆಯಾಗಿದ್ದ ಯೋಧನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ ಜೀವಿತಾ ಆತನೊಂದಿಗೆ ಸುತ್ತಾಟ ಮಾಡಿ ಫೋಟೋ ಹಾಗೂ ವೀಡಿಯೊ ಇಟ್ಟುಕೊಂಡು ತನ್ನ ಸ್ನೇಹಿತರೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಕಿತ್ತುಕೊಂಡಿದ್ದಾಳೆ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಯೋಧನಿಗೆ ಏಕಾಏಕಿ 50 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಳು. ಇದರಿಂದ ಕಂಗಾಲಾದ ಯೋಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸತೀಶ್ ಎಂಬ ಪೊಲೀಸ್ ಹೆಸರನ್ನೂ ಯೋಧ ಸಂದೇಶ್ ಬರೆದಿದ್ದಾರೆ. ಪೊಲೀಸ್ ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ.ಮಡಿಕೇರಿ ನಗರದ ಪಂಪಿನ ಕೆರೆ ಬಳಿ ಸಂದೇಶ್ಗೆ ಸೇರಿದ ವಸ್ತು ಪತ್ತೆಯಾಗಿವೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಂದ ಶೋಧ ಕಾರ್ಯ ಆರಂಭಿಸಲಾಗಿದೆ.ಯೋಧನ ಪತ್ನಿ ನೀಡಿದ ದೂರಿನ ಪ್ರಕಾರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
You must be logged in to post a comment Login