ಕಗ್ಗತ್ತಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಂಕಷ್ಟದಲ್ಲಿ ಬೀದಿ ಮಡೆಸ್ನಾನ ಭಕ್ತರು

ಪುತ್ತೂರು ಡಿಸೆಂಬರ್ 11: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ ಸಂದರ್ಭ ನಡೆಯುವ ಬೀದಿ ಮಡೆಸ್ನಾನ ನಡೆಸಲು ಭಕ್ತಾಧಿಗಳು ಭಾರಿ ಸಂಕಷ್ಟಪಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಹೆಚ್ಚಾಗಿ ನಡೆಸುವ ಈ ಸೇವೆಗೆ ರಸ್ತೆಯಲ್ಲಿ ದಾರಿ ದೀಪಗಳಿಲ್ಲದೆ ಭಕ್ತರು ತೊಂದರೆ ಅನುಭವಿಸುವಂತಾಗಿದೆ.

ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮ ರಥೋತ್ಸವದ ಸಮಯದಲ್ಲಿ ನಡೆಯುವ ವಿಶಿಷ್ಟ ಸೇವೆ ಬೀದಿ ಮಡೆಸ್ನಾನ ಸುಮಾರು ಮೂರು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಕುಮಾರಧಾರ ಹೊಳೆಯಿಂದ ಸ್ಥಾನ ಮಾಡಿ ಉರುಳು ಸೇವೆಯನ್ನು ನಡೆಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ.

ಆದರೆ ಈ ಸೇವೆಯನ್ನು ಹೆಚ್ಚಿನ ಭಕ್ತಾದಿಗಳು ರಾತ್ರಿ ಸಮಯದಲ್ಲಿ ನಡೆಸುತ್ತಿದ್ದು, ಈ ವರ್ಷ ದಾರಿ ದೀಪದ ತೊಂದರೆಯಿಂದ ರಾತ್ರಿ ವೇಳೆ ಭಕ್ತಾಧಿಗಳಿಗೆ ಈ‌ ಸೇವೆ ನೆರವೇರಿಸಲು ಕಷ್ಟವಾಗುತ್ತಿದೆ.

ಭಕ್ತಾಧಿಗಳು ಟಾರ್ಚ್ ಹಾಗೂ‌ ಇತರ ದೀಪದ ಬೆಳಕಿನ ಸಹಾಯದಿಂದ ಈ ಸೇವೆಯನ್ನು ನಡೆಸಬೇಕಾದ ಸಂಕಷ್ಟ ಎದುರಾಗಿದೆ. ರಾಜ್ಯದ ಅತೀ ಹೆಚ್ಚು ಆದಾಯ‌ ಗಳಿಸುತ್ತಿರುವ ನಂಬರ್ ಒನ್ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಈ ವರ್ಷ ತೀವ್ರ ಕಳಪೆ ಮಟ್ಟದ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಿರುವುದರಿಂದ ಭಕ್ತಾದಿಗಳಿಗೆ ತಮ್ಮ ಸೇವೆ ಪೂರೈಸಲು ತೊಂದರೆಯಾಗುತ್ತಿದೆ.

Facebook Comments

comments