Connect with us

PUTTUR

ಕಾರು ಹಾಗೂ ಆಕ್ಟೀವಾ ಹೊಂಡಾ ನಡುವೆ ಮುಖಾಮುಖಿ ಡಿಕ್ಕಿ

ಕಾರು ಹಾಗೂ ಆಕ್ಟೀವಾ ಹೊಂಡಾ ನಡುವೆ ಮುಖಾಮುಖಿ ಡಿಕ್ಕಿ

ಪುತ್ತೂರು ಡಿಸೆಂಬರ್ 12: ಕಾರು ಹಾಗೂ ಆಕ್ಟೀವಾ ಹೊಂಡಾ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಕೆಮ್ಮಾಯಿ ಬಳಿ ಈ ಅಪಘಾತ ಸಂಭವಿಸಿದ್ದು ಆಕ್ಟಿವಾ ಹೊಂಡ ಸವಾರ ಅದೃಷ್ಟವಶಾತ್ ಪಾರಾಗಿದ್ದಾನೆ.

ಕಾರು ಚಾಲಕನ ಬೇಜಾವಾಬ್ದಾರಿಯುತ ಚಾಲನೆಯೇ ಈ ಅಫಘಾತಕ್ಕೆ ಕಾರಣವಾಗಿದೆ. ಟಿಪ್ಪರ್ ಲಾರಿಯೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರುಗಡೆಯಿಂದ ಬಂದ ಅಕ್ಟಿವಾ ಹೊಂಡಾಕ್ಕೆ‌ ಕಾರು ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

ಹೆಲ್ಮೆಟ್ ಧರಿಸಿದ್ದರಿಂದ ಸ್ಕೂಟರ್ ಸವಾರನಿಗೆ ಪ್ರಾಣಾಪಾಯವಾಗಿಲ್ಲ, ಡಿಕ್ಕಿಯ ರಭಸಕ್ಕೆ ಕಾಲಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

VIDEO

Facebook Comments

comments