LATEST NEWS
ಕಾಸರಗೋಡು – ಮೊಹಮ್ಮದ್ ಅಶ್ಫಾಕ್ ಮದುವೆಯಾದ ವಿಸ್ಮಯ – ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕ್ಷಮೆ ಕೇಳಿದ ಶರಣ್ ಪಂಪ್ ವೆಲ್
ಮಂಗಳೂರು, ಆಗಸ್ಟ್ 10: ಭಾರೀ ವಿವಾದಕ್ಕೆ ಕಾರಣವಾಗಿದ್ದ ಕಾಸರಗೋಡಿನ ಲವ್ ಜಿಹಾದ್ ಪ್ರಕರಣದಲ್ಲಿ ಇದೀಗ ಯುವತಿ ತಾನು ಪ್ರೀತಿಸಿದ್ದ ಮುಸ್ಲಿಂ ಯುವಕ ನಟೋರಿಯಸ್ ಮೊಹಮ್ಮದ್ ಆಶ್ಫಾಕ್ ಜೊತೆ ವಿವಾಹವಾಗಿದ್ದಾಳೆ. ಈ ಕುರಿತಂತೆ ವಿಎಚ್ ಪಿ ಮುಖಂ ಶರಣ್ ಪಂಪ್ ವೆಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಎಂಬ ಯುವತಿ ಕ್ರಿಮಿನಲ್ ಹಿನ್ನೆಲೆ ಉಳ್ಳ ಮೊಹಮ್ಮದ್ ಅಶ್ಫಾಕ್ನ ಪ್ರೀತಿ ಬಲೆಗೆ ಬಿದ್ದಿದ್ದಳು. ಈ ನಡುವೆ ಮೊಹಮ್ಮದ್ ಆಶ್ಪಾಕ್ ಗೆ ಒಂದು ಮದುವೆಯಾಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ವಿಸ್ಮಯ ತಂದೆ ವಿನೋದ್ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು. ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್ ಕಳೆದ ಜೂನ್ 6 ರಂದು ಉಳ್ಳಾಲದಿಂದ ವಿಸ್ಮಯ ಕರೆದುಕೊಂಡು ಹೋಗಿದ್ದನು. ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂನ್ 30ರಂದು ಆಶ್ಫಕ್ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು.
#REALWARFIGHTER brigadier I N Rai ‘ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ’…! episode 1
ಈ ಬಗ್ಗೆ ವಿಸ್ಮಯ ತಂದೆ ವಿನೋದ್ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ, ಪೋಷಕರಿಗೆ ಒಪ್ಪಿಸಿದರು. ಬಳಿಕ ವಿನೋದ್ ಮಂಗಳೂರಿನ ವಿಹೆಚ್ಪಿ ನಾಯಕರನ್ನು ಭೇಟಿಯಾಗಿ, ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಅಶ್ಫಾಕ್ ಎರಡು ತಿಂಗಳ ಪರಿಚಯದಲ್ಲೇ ವಿಸ್ಮಯಳನ್ನು ಮೈಂಡ್ ವಾಶ್ ಮಾಡಿದ್ದಾನೆ. ಕೇರಳದಲ್ಲಿ ವಿಸ್ಮಯಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ನನ್ನ ಮಗಳನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು.
ನಂತರ ವಿಹೆಚ್ಪಿ ನಾಯಕರು ವಿಸ್ಮಯಳನ್ನು ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿರಿಸಿದ್ದರು. ಕೌನ್ಸಿಲಿಂಗ್ ಕೇಂದ್ರದಲ್ಲಿ ವಿಸ್ಮಯ, ಅಶ್ಫಾಕ್ ಜೊತೆಗೆ ತೆರಳುವುದಾಗಿ ಹೇಳುತ್ತಿದ್ದಳು. ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಾಸ್ ಕರೆದುಕೊಂಡು ಬರುವುದಾಗಿ ವಿಹೆಚ್ಪಿ ಮುಖಂಡರು ಭರವಸೆ ನೀಡಿದ್ದರು.
ಈ ನಡುವೆ ಅಶ್ಫಾಕ್ ಕೇರಳ ಹೈಕೋರ್ಟ್ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದಾನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿದೆ. ಕೊನೆಗೆ ನ್ಯಾಯಾಲಯದ ಆದೇಶ ಆಶ್ಫಕ್ ಪರವಾಗಿ ಬಂದಿದೆ. ಇದೀಗ, ಆಶ್ಫಕ್ ವಿಸ್ಮಯಳನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹವಾಗಿದ್ದಾನೆ. ತಂದೆ-ತಾಯಿ, ಹಿಂದೂ ಸಂಘಟನೆಗಳ ಹೋರಾಟದ ಬಳಿಕವೂ ವಿಸ್ಮಯ, ಆಶ್ಫಕನನ್ನು ವರಸಿದ್ದಾಳೆ.
‘ಕ್ಷಮಿಸಿ ವಿನೋದ್ ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’. ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಶ್ಫಕ್ ಮದುವೆಯಾಗಿದ್ದಾನೆ ಎಂದು ಫೇಸ್ಬುಕ್ನಲ್ಲಿ ಫೋಸ್ಟ್ ಹಾಕಿದ್ದಾರೆ.
You must be logged in to post a comment Login