LATEST NEWS
ಉಡುಪಿ – ಶಾಲಾ ವಿಧ್ಯಾರ್ಥಿನಿ ಮೇಲೆ ನಾಯಿ ದಾಳಿ – ಕೊಡೆ ಬೀಸಿ ತಪ್ಪಿಸಿಕೊಂಡ ಬಾಲಕಿ
ಉಡುಪಿ ಅಗಸ್ಟ್ 10: ಶಾಲಾ ವಿಧ್ಯಾರ್ಥಿನಿ ಮೇಲೆ ಬೀದಿ ಬದಿ ನಾಯಿಗಳು ದಾಳಿ ಮಾಡಲು ಹೋದ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ಏಕಾಏಕಿ ನಾಲ್ಕೈದು ನಾಯಿಗಳು ಅಟ್ಯಾಕ್ ಮಾಡಲು ಹೋಗಿವೆ. ಈ ವೇಳೆ ಬಾಲಕಿ ಕೂಗಿ ಬೊಬ್ಬೆ ಹಾಕಿದ್ದಾರೆ. ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ವಿದ್ಯಾರ್ಥಿನಿ ಬಚಾವಾಗಿದ್ದಾರೆ. ವಿದ್ಯಾರ್ಥಿನಿಯ ಮೇಲೆ ನಡೆದ ನಾಯಿ ದಾಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
You must be logged in to post a comment Login