Connect with us

LATEST NEWS

ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಕವಾಯತು ನೇರಪ್ರಸಾರ

ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಕವಾಯತು ನೇರಪ್ರಸಾರ

ಮಂಗಳೂರು ಸೆಪ್ಟೆಂಬರ್ 13: ಮಂಗಳೂರು ನಗರ ಪೋಲೀಸ್ ಕಮಿಷನರೇಟ್ ವ್ಯಾಪ್ತಿಯ ಪೋಲೀಸರ ಕವಾಯತು ಇಂದು ನಡೆಯಿತು. ಮಂಗಳೂರು ಪೋಲೀಸ್ ಕಮಿಷನರ್ ಡಾ. ಪಿ.ಎಸ್.ಹರ್ಷ ಮಂಗಳೂರು ನಗರ ಪೋಲೀಸ್ ವ್ಯಾಪ್ತಿಯಲ್ಲಿ ತರಲಾಗಿರುವ ಹೊಸ ಯೋಜನೆಗಳ ಕುರಿತು ಪೋಲೀಸರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಪೋಲೀಸರ ಕವಾಯತನ್ನು ಪೋಲೀಸ್ ಇಲಾಖೆಯ ಅಧಿಕೃತ ಟ್ವೀಟರ್, ಫೇಸ್ಬುಕ್ ಖಾತೆಗಳಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯ ವೀಕ್ಷಕರು ಪೋಲೀಸರ ಈ ಕವಾಯತು ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದ ಮೂಲಕ ವೀಕ್ಷಿಸಿದರು. ನಗರ ಪೋಲೀಸರ ಮಹತ್ವದ ಯೋಜನೆಯಾದ ನಮ್ಮ ಪೋಲೀಸ್ , ನಮ್ಮ ಹೆಮ್ಮ ಮೂಲಕ ನಾಗರಿಕ ಪೋಲೀಸರಾಗಿ ಕರ್ತವ್ಯ ನಿರ್ವಹಿಸಿದ ಹಲವು ನಾಗರಿಕರಿಗೆ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.

Facebook Comments

comments