ಮಂಗಳೂರು ನಗರ ಪೋಲೀಸರ ಕವಾಯತನಲ್ಲಿ ಗಮನ ಸೆಳೆದ ಶ್ವಾನ

ಮಂಗಳೂರು ಸೆಪ್ಟೆಂಬರ್ 13: ಮಂಗಳೂರು ನಗರ ಪೋಲೀಸರ ಕವಾಯತು ಕಾರ್ಯಕ್ರಮ ಪೋಲೀಸ್ ಮೈದಾನದಲ್ಲಿ ನಡೆಯಿತು. ಈ ಕವಾಯತಿನಲ್ಲಿ ಪೋಲೀಸರ ಜೊತೆಗೆ ಶ್ವಾನವೊಂದು ಗಮನ ಸೆಳೆದಿತ್ತು.

ಪೋಲೀಸರ ಜೊತೆಯಲ್ಲೇ ಬೆಳೆದಿರುವ ಈ ಶ್ವಾನಕ್ಕೂ ಪೋಲೀಸರಷ್ಟೇ ಶಿಸ್ತು ಕಲಿಸಲಾಗಿದೆಯೇ ಎನ್ನೋದು ಇಂದು ನಡೆದ ಕವಾಯತ್ ನಲ್ಲಿ ಕಂಡು ಬಂತು. ಪೋಲೀಸರು ಕವಾಯತು ನಡೆಸಲು ಫಾಲಿಂಗ್ ನಲ್ಲಿ ನಿಂತ ತಕ್ಷಣ ಈ ಶ್ವಾನವೂ ಬಂದು ಪೋಲೀಸ್ ತುಕಡಿಯ ಮಧ್ಯೆ ನಿಂತಿತ್ತು.

ಬಳಿಕ ಕವಾಯತು ಅರಂಭಗೊಂಡಂತೆ ಶ್ವಾನವು ಕವಾಯತ್ ನ ಮೊದಲ ಸಾಲಿನಲ್ಲಿ ಹೆಜ್ಜೆ ಹಾಕಲು ಆರಂಭಿಸಿತ್ತು. ಕವಾಯತ್ ನಲ್ಲಿ ತೆರೆಳಿದ ಪೋಲೀಸರು ಪೋಲೀಸ್ ಕಮಿಷನರ್ ಗೆ ಸೆಲ್ಯೂಟ್ ಮೂಡುವ ಸಂದರ್ಭದಲ್ಲಿ ಈ ಶ್ವಾನವೂ ಕಮಿಷನರ್ ಮುಂಭಾಗದಲ್ಲಿ ಹಾದು ಹೋಗುವ ಮೂಲಕ ಇಡೀ ಕವಾಯತು ಕಾರ್ಯಕ್ರಮದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು.

Facebook Comments

comments