Connect with us

LATEST NEWS

ಎಚ್ಚರಿಕೆ ನಿರ್ಲಕ್ಷಿಸಿ ಸಮುದ್ರಕ್ಕಿಳಿದವರ ರಕ್ಷಿಸಿದ ಜೀವ ರಕ್ಷಕ ದಳ

ಎಚ್ಚರಿಕೆ ನಿರ್ಲಕ್ಷಿಸಿ ಸಮುದ್ರಕ್ಕಿಳಿದವರ ರಕ್ಷಿಸಿದ ಜೀವ ರಕ್ಷಕ ದಳ

ಮಂಗಳೂರು ಅಕ್ಟೋಬರ್ 1 : ಪ್ರಕ್ಷುಬ್ಧಗೊಂಡಿರುವ ಕಡಲಿನಲ್ಲಿ ನೀರಾಟ ಆಡಲು ಇಳಿದು ಅಪಾಯಕ್ಕೆ ಸಿಲುಕಿದ್ದ ಇಬ್ಬರು ಪ್ರವಾಸಿಗರನ್ನು ಜೀವ ರಕ್ಷಕ ದಳದವರು ರಕ್ಷಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿಗಳಾದ ಸಾಧಿಕ್ (21)ಹಾಗೂ ನರಸಿಂಹ ಮೂರ್ತಿ(19) ಎಂಬುವರನ್ನು ಜೀವ ರಕ್ಷಕ ದಳದವರು ರಕ್ಷಿಸಿದ್ದಾರೆ.

 

ದಸರಾ ರಜೆಯ ಪ್ರಯುಕ್ತ ಬೆಂಗಳೂರಿನಿಂದ ನಾಲ್ಕು ಮಂದಿ ಗೆಳೆಯರ ತಂಡ ಪ್ರವಾಸಕ್ಕೆಂದು ಮಂಗಳೂರಿಗೆ ಆಗಮಿಸಿದೆ. ಮಂಗಳೂರಿನಲ್ಲಿ ದೇವಾಲಯಗಳನ್ನು ಸುತ್ತಾಡಿ ನಂತರ ಪಣಂಬೂರು ಬೀಚ್ ಗೆ ಭೇಟಿ ನೀಡಿದ ಗೆಳೆಯರ ತಂಡ ಎಂದು ಮಧ್ಯಾಹ್ನ ಪಣಂಬೂರು ಬೀಚಿಗೆ ಬಂದಿದೆ.

ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಜೀವ ರಕ್ಷಕ ದಳದವರು ಎಚ್ಚರಿಕೆಯನ್ನೂ ನಿರ್ಲಕ್ಷಿಸಿದ ತಂಡ ಪ್ರಕ್ಷುಬ್ಧ ಕಡಲಲ್ಲಿ ನೀರಾಟ ಆಡಲು ಇಳಿದಿದೆ. ಈ ಸಂದರ್ಭದಲ್ಲಿ ನೀರಿನ  ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಸಾದಿಕ್ ಹಾಗೂ ನರಸಿಂಹಮೂರ್ತಿ ಅವರನ್ನು ಜೀವ ರಕ್ಷಕ ದಳವರು ರಕ್ಷಿಸಿದ್ದಾರೆ.

ಸೆಪ್ಟೆಂಬರ್ 29 ರಿಂದ ಇಂದಿನವರೆಗೆ ಪಣಂಬೂರು ಬೀಚ್ ನಲ್ಲಿ ನೀರಿಗಿಳಿದು ಅಪಾಯಕ್ಕೆ ಸಿಲುಕಿದ್ದ 10 ಮಂದಿ ಪ್ರವಾಸಿಗರನ್ನು ಜೀವರಕ್ಷಕರು ರಕ್ಷಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *