Connect with us

  LATEST NEWS

  ಮರವಂತೆ ಬೀಚ್ ನಲ್ಲಿ ಕಾರಿನ ಗ್ಲಾಸ್ ಒಡೆದು ಕಳ್ಳತನ

  ಮರವಂತೆ ಬೀಚ್ ನಲ್ಲಿ ಕಾರಿನ ಗ್ಲಾಸ್ ಒಡೆದು ಕಳ್ಳತನ

  ಉಡುಪಿ ಅಕ್ಟೋಬರ್ 1: ಸಮುದ್ರ ಕಿನಾರೆಗೆ ಬಂದಿದ್ದ ಪ್ರವಾಸಿಗರ ಕಾರಿನ ಗ್ಲಾಸ್ ಒಡೆದು ಚಿನ್ನಾಭರಣ ಕಳವು ಮಾಡಿದ ಘಟನೆ ಕುಂದಾಪುರದ ಮರವಂತೆಯಲ್ಲಿ ನಡೆದಿದೆ. ಬಂಟ್ವಾಳ ಮೂಲದ ಗಣೇಶ್ ಕಾಮತ್, ಸಂತೋಷ್ ನಾಯಕ್ ಹಾಗು ಮಡಿಕೇರಿ ಮೂಲದ ಬಿ.ಕೆ‌ ಸೂರ್ಯ ನಾರಾಯಣ ಎಂಬವರು ರಜೆಯ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕಾರಿನಲ್ಲಿ ಮರವಂತೆ ಬೀಚ್ ಗೆ ಬಂದಿದ್ದರು.
  ಬೀಚ್ ಗೆ ಹೋಗಿ ವಾಪಾಸ್ ಕಾರ್ ಬಳಿ ಬಂದಾಗ ಅವರ 3 ಕಾರಿನ ಗಾಜುಗಳು ಒಡೆದಿರುವುದು ಕಂಡು ಬಂದಿದೆ. ಪ್ರವಾಸಿಗರು ನೀರಾಟದಲ್ಲಿ ಮಘ್ನರಾಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕೈ ಚಳಕ ತೊರಿದ್ದಾರೆ.

  ಒಟ್ಟು 13 ಪವನ್ ಚಿನ್ನ, ನಾಲ್ಕು ಮೊಬೈಲ್, 3,300 ನಗದು, ಎಟಿಎಂ ಕಾರ್ಡ್ ಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಒಂದೇ ತಂಡ ಸರಣಿ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply