LATEST NEWS
ಮೂಡಬಿದಿರೆ – ಬಾವಿಗೆ ಬಿದ್ದ ಚಿರತೆ ರಕ್ಷಣೆ

ಮೂಡುಬಿದಿರೆ ಎಪ್ರಿಲ್ 09: ಮನೆಯೊಂದರ ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮೂಡಬಿದಿರೆ ಶಿರ್ತಾಡಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮಕ್ಕಿ ನಿವಾಸಿ ರಮೇಶ ಪೂಜಾರಿ ಎಂಬುವರ ಮನೆಯ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ ನಿರ್ದೇಶನದಂತೆ, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಾವ್ಯಾ ಆರ್., ರಾಘವೇಂದ್ರ ಶೆಟ್ಟಿ, ಬಸಪ್ಪ ಹಲಗೇರ, ಗಸ್ತು ಅರಣ್ಯ ಪಾಲಕರಾದ ಧರ್ಮರಾಜ, ಮಂಜುನಾಥ ಮಳ್ಳಿ, ರಾಜೇಶ್, ಚಂದ್ರಶೇಖರ್, ಅರಣ್ಯ ವೀಕ್ಷಕರಾದ ಜನಾರ್ದನ, ರಂಜನ್, ವಾಹನ ಚಾಲಕ ಮಿಥುನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
