LATEST NEWS
ಚಿರತೆ ದಾಳಿಗೆ ಬಲಿಯಾದ ಮಹಿಳೆ ಒಂದು ವರ್ಷದ ನಂತರ ದೊರೆತ ಅಸ್ಥಿಪಂಜರ
ಚಿರತೆ ದಾಳಿಗೆ ಬಲಿಯಾದ ಮಹಿಳೆ ಒಂದು ವರ್ಷದ ನಂತರ ದೊರೆತ ಅಸ್ಥಿಪಂಜರ
ಮಂಗಳೂರು ಎಪ್ರಿಲ್ 09: ಮಂಗಳೂರು ಹೊರವಲಯದ ಬಜ್ಪೆ ಕೊಳಂಬೆ ಗ್ರಾಮದಲ್ಲಿ ಮಹಿಳೆಯ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಕೊಳಂಬೆ ಗ್ರಾಮದ ಹೊಯಿಗೆ ಬೈಲು ಗುಡ್ಡ ಪ್ರದೇಶದಲ್ಲಿ ಈ ಅಸ್ಥಿ ಪಂಜರ ಪತ್ತೆಯಾಗಿದ್ದು , ಇದು 2019 ರ ಜೂನ್ ತಿಂಗಳಲ್ಲಿ ಕಾಣೆಯಾಗಿದ್ದ ಸ್ಥಳೀಯ 75 ವರ್ಷದ ಮಹಿಳೆ ಯಮುನಾ ಎಂಬ ಮಹಿಳೆಯದ್ದು ಎಂದು ಗುರುತಿಸಲಾಗಿದೆ.
ಅವರು ಉಟ್ಟ ಸೀರೆ ಮತ್ತು ಸ್ಥಳದಲ್ಲಿ ದೊರಕಿದ್ದ ಬಳೆಗಳ ಆಧಾರದಲ್ಲಿ ಮಹಿಳೆಯ ಗುರುತು ಪತ್ತೆ ಮಾಡಲಾಗಿದೆ. ಚಿರತೆ ದಾಳಿಯಿಂದ ಯಮುನಾ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಬಜ್ಪೆ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿ ಸಮಗ್ರ ತನಿಖೆಯನ್ನು ಕೈಗೊಂಡಿದ್ದಾರೆ. ಬಜ್ಪೆಯ ಕೊಳಂಬೆ, ಅದ್ಯಪಾಡಿ ಸುತ್ತಮುತ್ತ ಪ್ರದೇಶ ದಟ್ಟವಾದ ಅರಣ್ಯದಿಂದ ಕೂಡಿದ್ದು ಈ ಭಾಗದಲ್ಲಿ ಚಿರತೆ, ಕಾಡು ಕೋಣ ಮತ್ತಿತರ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು ಜನ ಭಯ ಭೀತರಾಗಿದ್ದಾರೆ.