ಕೇರಳ ರೋಗಿಗಳಿಂದ ದಕ್ಷಿಣಕನ್ನಡದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆತಂಕ…!!

ಮಂಗಳೂರು,ಎಪ್ರಿಲ್ 09. ಕಾಸರಗೋಡಿನಿಂದ ಮಂಗಳೂರಿಗೆ ಕೊರೊನಾ ಆತಂಕ ಹೆಚ್ಚಾಗಲಿದೆ ಎನ್ನುವ ಆತಂಕದ ನಡುವೆಯೇ ಇದೀಗ ಇಂಥಹುದೇ ಒಂದು ಘಟನೆ ಬೆಳಕಿಗೆ ಬಂದಿದೆ.

ಕಾಸರಗೋಡಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದ ಮಹಿಳಿಯೋರ್ವರಲ್ಲಿ ಕೊರೊನಾ ಲಕ್ಷಣ ಪತ್ತೆಯಾಗಿದೆ. ಈ ನಡುವೆ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಹಿಳೆಯ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರ ಪರೀಕ್ಷಾ ವರದಿ ಇಂದು ಸಂಜೆಯೊಳಗೆ ಬರುವ ನಿರೀಕ್ಷೆಯಿದೆ.

ಬುಧವಾರವೂ ಕೇರಳದಿಂದ ಮೂವರು ಬಂದಿದ್ದು, ಇಬ್ಬರಿಗೆ ಚಿಕಿತ್ಸೆ ಲಭ್ಯವಿಲ್ಲ ಎಂದು ಅವರನ್ನು ಕಣ್ಣೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮಂಗಳೂರಿನ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಕೇರಳದಿಂದ ಬರುವ ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.

ಕೇರಳದಿಂದ ಇದೀಗ ನಿರಂತರವಾಗಿ ರೋಗಿಗಳು ಮಂಗಳೂರಿಗೆ ಬರಲಾರಂಭಿಸಿದ್ದು, ಇವರಲ್ಲಿ ಕೊರೊನಾ ಸೋಂಕಿತರೂ ಬರುವ ಸಾಧ್ಯತೆಯಿದೆ ಎನ್ನುವ ಆತಂಕ ಮಾಡಿದೆ. ಒಂದು ವೇಳೆ ಇಂಥ ರೋಗಿಗಳು ಮಂಗಳೂರಿನ ಆಸ್ಪತ್ರೆಗೆ ಕೇರಳದಿಂದ ಕೊರೊನಾ ಸೋಂಕಿತರು ಬಂದದ್ದೇ ಆದಲ್ಲಿ ಜಿಲ್ಲೆಯ ಆಸ್ಪತ್ರೆಗಳನ್ನೂ ಲಾಕ್ ಡೌನ್ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.