BANTWAL
ಆಹಾರ ಹುಡುಕಿಕೊಂಡು ಬಂದು ಮನೆ ಬಾವಿಗೆ ಬಿದ್ದ ಚಿರತೆ

ಆಹಾರ ಹುಡುಕಿಕೊಂಡು ಬಂದು ಮನೆ ಬಾವಿಗೆ ಬಿದ್ದ ಚಿರತೆ
ಬಂಟ್ವಾಳ ಸೆಪ್ಟೆಂಬರ್ 30: ಆಹಾರ ಹುಡುಕಿ ಬಂದ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಸಂಭವಿಸಿದೆ.
ರಾಯಿ ಸಮೀಪದ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಎಂಬವರ ಮನೆ ಅಂಗಳದಲ್ಲಿದ್ದ ಎರಡು ಸಾಕು ನಾಯಿಗಳನ್ನು ಹಿಡಿಯಲು ಬಂದಿದ್ದ ಚಿರತೆ ಮನೆಯ ಬಾವಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆ ಬಾವಿ ಬಳಿ ಶಬ್ಬ ಕೇಳಿ ಇನುಕಿ ನೋಡಿದಾಗ ಭಾರಿ ಗಾತ್ರದ ಚಿರತೆ ಕಂಡು ಬಂದಿದೆ.

ಕೂಡಲೇ ಸ್ಥಳಿಯ ಪೊಲೀಸ್ ಹಾಗೂ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು ಮಂಗಳೂರಿನಿಂದ ಹಿರಿಯ ಅಧಿಕಾರಿಗಳು ಮತ್ತು ನುರಿತ ತಜ್ಞರು ಸ್ಥಳಕ್ಕೆ ತೆರಳಿದ್ದು ಚಿರತೆಯನ್ನು ಬಾವಿಯಿಂದ ಮೇಲಕ್ಕೆ ತೆಗೆದು ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಸಲಾಗುತ್ತಿದೆ.