FILM
ಡ್ರೋನ್ ಪ್ರತಾಪ್ ಗೆ ಸಂಕಷ್ಟ – ಲೀಗಲ್ ನೊಟೀಸ್ ಕಳುಹಿಸಿದ ಡಾ. ಪ್ರಯಾಗ್
ಬೆಂಗಳೂರು ಡಿಸೆಂಬರ್ 18: ಕೊರೊನಾ ಹಾವಳಿ ಸಂದರ್ಭ ಕ್ವಾರಂಟೈನ್ ವೇಳೆ ಬಿಬಿಎಂಪಿ ಅಧಿಕಾರಿಯೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದ ಡ್ರೋನ್ ಪ್ರತಾಪ್ ಗೆ ಇದೀಗ ಸಂಕಷ್ಟ ಎದುರಾಗಿದ್ದು, ಅಧಿಕಾರಿಯೊಬ್ಬರು ಬಿಗ್ ಬಾಸ್ ನಲ್ಲೇ ಕ್ಷಮೆಯಾಚಿಸುವಂತೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಪಶು ವೈದ್ಯರಾಗಿರುವ ಡಾ.ಪ್ರಯಾಗ್ ಅವರು ಕೋವಿಡ್ ಸಮಯದಲ್ಲಿ ಬಿಬಿಎಂಪಿಯಲ್ಲಿ ನೋಡಲ್ ಅಧಿಕಾರಿಯಾಗಿದ್ದರು. ಕ್ವಾರಂಟೈನ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿ ತಮ್ಮ ಮೇಲೆ ಹಲ್ಲೆ ನಡೆಸಿ ಟಾರ್ಚರ್ ನೀಡಿದ್ದರು ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಪ್ರತಾಪ್ ಆರೋಪಿಸಿದ್ದರು.
ಈ ಆರೋಪವನ್ನು ತಳ್ಳಿಹಾಕಿರುವ ಡಾ. ಪ್ರಯಾಗ್ ಪ್ರತಾಪ್ ತಮ್ಮ ವಿರುದ್ದ ಮಾನಹಾನಿಯಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿನ್ನಲೆ ಅವರಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಪ್ರತಾಪ್ ಬಿಗ್ ಬಾಸ್ ವೇದಿಕೆಯಲ್ಲಿಯೇ ಕ್ಷಮೆಯಾಚನೆ ಮಾಡಬೇಕು. ಲಿಖಿತ ರೂಪದಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ವಕೀಲರ ಮೂಲಕ ಡಾ.ಪ್ರಯಾಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತ ರೂಪದಲ್ಲಿ ಕ್ಷಮೆಯಾಚನೆ ಮಾಡದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.