Connect with us

    LATEST NEWS

    ಆರ್ಡರ್ ಮಾಡಿದ್ದು ಲ್ಯಾಪ್ ಟಾಪ್ ಬಂದಿದ್ದು ಕಲ್ಲು….!!

    ಮಂಗಳೂರು ಅಕ್ಟೋಬರ್ 27: ಆನ್ ಲೈನ್ ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್ ನಲ್ಲಿ ಲ್ಯಾಪ್ ಟಾಪ್ ಖರೀದಿಸಿದ ಮಂಗಳೂರಿನ ವ್ಯಕ್ತಿಗೆ ದೊಡ್ಡ ಕಲ್ಲು ಹಾಗೂ ಹಾಳಾದ ಕಂಪ್ಯೂಟರ್ ನ ಕೆಲವು ಬೀಡಿ ಭಾಗಗಳು ಬಂದ ಪ್ರಕರಣ ನಡೆದಿದೆ.


    ಮಂಗಳೂರಿನ ಚಿನ್ಮಯ ರಮಣ ಎನ್ನುವವರು ಪ್ಲಿಪ್ ಕಾರ್ಟ್ ನಲ್ಲಿ ಗೇಮಿಂಗ್ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದ ಪಾರ್ಸೆಲ್ ನಲ್ಲಿ ದೊಡ್ಡ ಕಲ್ಲು ಹಾಗೂ ಕಂಪ್ಯೂಟರ್ ನ ಕೆಲವು ಬಾಗಗಳಿದ್ದವು. ಈ ಹಿನ್ನಲೆ ಚಿನ್ಮಯ ಅವರು ತನಗೆ ದೊರೆತ ಕಲ್ಲು ಮತ್ತು ತ್ಯಾಜ್ಯ ವಸ್ತುಗಳ ಫೋಟೋ ಲಗತ್ತಿಸಿ ಪ್ಲಿಪ್ ಕಾರ್ಟ್ ಗೆ ಕಂಪ್ಲೈಟ್ ಮಾಡಿದ್ದರು, ಆದರೆ ಪ್ಲಿಪ್ ಕಾರ್ಟ್ ಇವರ ಮನವಿಯನ್ನು ತಿರಸ್ಕರಿಸಿತ್ತು. ಚಿನ್ಮಯ ರಮಣ ಅವರು ಅನ್‌ ಬಾಕ್ಸಿಂಗ್ ವಿಡಿಯೋವನ್ನು ಕೂಡ ಮಾಡಿದ್ದರು. ಅಲ್ಲದೆ, ಗ್ರಾಹಕರು ತಪ್ಪು ಪ್ಯಾಕೇಜ್‌ಗಳನ್ನು ಸ್ವೀಕರಿಸುವ ಬಗ್ಗೆ ಹಲವಾರು ದೂರುಗಳ ನಂತರ ಫ್ಲಿಪ್‌ಕಾರ್ಟ್ ಆರಂಭಿಸಿದ ಓಪನ್ ಬಾಕ್ಸ್ ಡೆಲಿವರಿ ಸಿಸ್ಟಮ್ ಈ ಉತ್ಪನ್ನಕ್ಕೆ ಲಭ್ಯವಿರಲಿಲ್ಲ ಎಂದೂ ಚಿನ್ಮಯ ರಮಣ ಹೇಳಿಕೊಂಡಿದ್ದಾರೆ.


    ಇತರರು ತಮ್ಮಂತೆ “ಅಸಹಾಯಕ” ಭಾವನೆಗೆ ಒಳಗಾಗುವುದರಿಂದ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡದಂತೆ ಒತ್ತಾಯಿಸಿದರು. ಆದರೆ, 1 ದಿನದ ನಂತರ, ಫ್ಲಿಪ್‌ಕಾರ್ಟ್ ತನಗೆ ಹಣವನ್ನು ರೀಫಂಡ್‌ ಮಾಡಿದೆ ಎಂದು ಹೇಳಿದ್ದಾರೆ. ಪೂರ್ಣ ಹಣವನ್ನು ವಾಪಸ್‌ ನೀಡಿದ್ದು, ಈ ಹಿನ್ನೆಲೆ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನೊಂದಿಗೆ ಶಾಪಿಂಗ್ ಮಾಡುವುದನ್ನು ಮುಂದುವರಿಸುತ್ತೇನೆ ಎಂದೂ ಅವರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply