Connect with us

    BANTWAL

    ಬಂಟ್ವಾಳ – ಮನೆ ಮೇಲೆ ಕುಸಿದ ಗುಡ್ಡ : ಮಹಿಳೆ ಸಾವು, ಯುವತಿಯ ರಕ್ಷಣೆ

    ಬಂಟ್ವಾಳ ಜುಲೈ 07: ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಅಪಾರ ಪ್ರಮಾಣದ ಹಾನಿಯುಂಟು ಮಾಡಿದ್ದು, ಬಂಟ್ವಾಳದಲ್ಲಿ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಮಹಿಳೆಯೊಬ್ಬರು ಸಾವನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮನೆಯೊಳಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಲಾಗಿದೆ. ಘಟನೆ ಬಂಟ್ವಾಳ ತಾಲ್ಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.


    ಗ್ರಾಮದ ಗುಂಪು ಮನೆಗಳ ಪೈಕಿ ಮಹಮ್ಮದ್ ಎಂಬುವರ ಮನೆ ಮೇಲೆ ಗುಡ್ಡ ಜರಿದು ಬಿದ್ದಿದೆ. ಮನೆಯ ಒಳಗಿದ್ದ ಮಹಮ್ಮದ್ ಅವರ ಪತ್ನಿ ಝರಿನಾ (49) ಮತ್ತು ಪುತ್ರಿ ಶಫಾ (20) ಸಿಕ್ಕಿಕೊಂಡಿದ್ದರು. ಝರೀನಾ ಅವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಾಗ ದಾರಿ‌ ಮಧ್ಯೆ ಸಾವಿಗೀಡಾಗಿದ್ದಾರೆ.


    ಶಫಾ ಅವರನ್ನು ಕೂಡಲೇ ಊರ ಜನರು ಹೊರಗೆ ತೆಗೆದಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಲಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ನಗರ ಠಾಣೆ ಪೊಲೀಸ್ ಸಿಬ್ಬಂದಿ‌ ಮತ್ತು ತಹಶೀಲ್ದಾರ್ ಎನ್.ಎಸ್ ಕೂಡಲಗಿ ಇದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply