LATEST NEWS
ಶಿರೂರು ಶ್ರೀಗಳ ಆಪ್ತ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಶಿರೂರು ಶ್ರೀಗಳ ಆಪ್ತ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಉಡುಪಿ ಜುಲೈ 21 : ಶಿರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶಿರೂರೂ ಶ್ರೀಗಳಿಗೆ ಆಪ್ತರಾಗಿದ್ದಾರೆ ಎಂದು ಹೇಳಲಾಗುವ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಶಿರೂರು ಶ್ರೀಗಳ ಅಸಹಜ ಸಾವಿನ ಪ್ರಕರಣವನ್ನು ಬೆನ್ನತ್ತಿರುವ ಪೊಲೀಸರು ಈಗಾಗಲೇ ಹಲವರು ವಿಚಾರಣೆಯನ್ನು ನಡೆಸಿದ್ದಾರೆ. ಈ ನಡುವೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೇಜಾವರ ಶ್ರೀಗಳು ಶಿರೂರು ಶ್ರೀಗಳಿಗೆ ಸ್ತ್ರೀಯಂರ ಸಂಗ ಇತ್ತು ಎಂಬ ಹೇಳಿಕೆಯ ನಂತರ ಪೊಲೀಸರು ಈಗ ಶಿರೂರು ಶ್ರೀಗಳ ಜೊತೆ ಅಪ್ತರಾಗಿರುವ ಮಹಿಳೆಯರ ವಿಚಾರಣೆ ಆರಂಭಿಸಿದ್ದಾರೆ.

ಈ ಹಿನ್ನಲೆಯಲ್ಲಿ ಶಿರೂರು ಶ್ರೀಗಳಿಗೆ ಇತ್ತೀಚೆಗೆ ಆಪ್ತರಾಗಿದ್ದ ಕಾರ್ಕಳದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮಹಿಳೆಯ ಜತೆಗೆ ಆಕೆಯ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಕಾರನ್ನು ಸ್ವಾಮೀಜಿ ಅವರೇ ನೀಡಿದ್ದರು. ಆಕೆ ಶಿರೂರು ಶ್ರೀಗಳಿಗೆ ಇದೇ ಕಾರಿನಲ್ಲಿ ಆಹಾರ ಕಳುಹಿಸಿಕೊಡುತ್ತಿದ್ದಳು ಅಥವಾ ತಾನೇ ಡ್ರೈವ್ ಮಾಡಿಕೊಂಡು ಆಹಾರ ತಂದುಕೊಡುತ್ತಿದ್ದಳು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲೇ ಪೊಲೀಸರು ಆಕೆಯ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸರು ಮಾತ್ರ ಈ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ.
ಈ ನಡುವೆ ಶಿರೂರು ಸ್ವಾಮೀಜಿ ಸಹೋದರನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಶಿರೂರು ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.