Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೈಕೊಟ್ಟ ಏರ್ ಟೆಲ್ 4ಜಿ ನೆಟ್ ವರ್ಕ್

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೈಕೊಟ್ಟ ಏರ್ ಟೆಲ್ 4ಜಿ ನೆಟ್ ವರ್ಕ್

    ಮಂಗಳೂರು ಜುಲೈ 21: ದೇಶದ ಅತಿದೊಡ್ಡ ದೂರಸಂಪರ್ಕ ಸೇವಾದಾರ ಕಂಪನಿಯಾದ ಏರ್‌ಟೆಲ್‌ನ 4ಜಿ ನೆಟ್ ವರ್ಕ್ ಸೇವೆ ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವ್ಯತ್ಯಯವಾಗುತ್ತಿದೆ. ಮೊಬೈಲ್ ನಲ್ಲಿ ಇಂಟರ್ ನೆಟ್ ಇಲ್ಲದೆ ಗ್ರಾಹಕರು ಪರದಾಡುತ್ತಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಏರ್ ಟೆಲ್ ನ 4ಜಿ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಗ್ರಾಹಕರು ಏರ್ ಟೆಲ್ ವಿರುದ್ದ ಕಿಡಿಕಾರುತ್ತಿದ್ದಾರೆ.

    ಏರ್‌ಟೆಲ್‌ನ ಗ್ರಾಹಕ ಸೇವಾ ಅಧಿಕಾರಿಗಳನ್ನು ಈ ಕುರಿತು ಸಂಪರ್ಕಿಸಿ ದಾಗ ಶೀಘ್ರ ಈ ಸಮಸ್ಯೆ ಬಗೆಹರಿಯಲಿದೆ ಎನ್ನುವ ಭರವಸೆ ಸಿಗುತ್ತಿದೆ. ಆದರೂ ಪದೇ ಪದೆ ನೆಟ್‌ವರ್ಕ್ ಕೈ ಕೊಡುವುದು, ನಿಧಾನವಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಗ್ರಾಹಕರು ಕಿರಿಕಿರಿ ಎದುರಿಸುತ್ತಿದ್ದಾರೆ. ಕೆಲ ಗ್ರಾಹಕರಂತೂ ಏರ್‌ಟೆಲ್‌ನಿಂದ ಪೋರ್ಟ್ ಆಗಲೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಆದರೆ ನಗರದ ಬಹುತೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿ ಜನರು ತೀವ್ರವಾಗಿ ಪರದಾಡಿದ್ದಾರೆ. ನೆಟ್‌ವರ್ಕ್ ಸೇವೆಗಳ ಮೂಲಕವೇ ವ್ಯಾಪಾರ ವಹಿವಾಟು, ಹಲವು ತುರ್ತು ಸೇವೆಗಳನ್ನು ಪಡೆಯಲು ತೊಂದರೆಯಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply