Connect with us

    LATEST NEWS

    ಹುಡುಗಿಯರನ್ನು ಐಟಮ್ ಎಂದು ಕರೆದವನಿಗೆ ಒಂದೂವರೆ ವರ್ಷ ಜೈಲು….!!

    ಮುಂಬೈ ಅಕ್ಟೋಬರ್ 27: ಹುಡುಗಿಯರನ್ನು ಐಟಮ್ ಎಂದು ಕರೆದವನಿಗೆ ಮುಂಬೈ ವಿಶೇಷ ಕೋರ್ಟ್ ಒಂದೂವರೆ ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.


    ಘಟನೆ ನಡೆದಿದ್ದು. 2015ರ ಜುಲೈ 14ರಂದು ಸಬ್‌ಅರ್ಬನ್‌ ಮುಂಬೈನಲ್ಲಿ, 25 ವರ್ಷದ ಆರೋಪಿ ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ‘ಐಟಮ್‌’ ಎಂದು ಕರೆದು, ಜಡೆ ಹಿಡಿದು ಎಳೆದಾಡಿದ್ದ. ಆರೋಪಿಯ ವರ್ತನೆ ಸಂಪೂರ್ಣವಾಗಿ ಅನುಚಿತವಾಗಿದೆ. ಆತ ದುರುದ್ದೇಶದಿಂದಲೇ ಆಕೆಯ ಜಡೆಯನ್ನು ಹಿಡಿದು ಎಳೆದಿದ್ದಾನೆ ಮತ್ತು ಆಕೆಯನ್ನು ‘ಐಟಮ್‌’ ಎಂದು ಕರೆದಿದ್ದಾನೆ. ಇದು ಬಾಲಕಿಯನ್ನು ಲೈಂಗಿಕವಾಗಿ ಗುರಿಯಾಗಿಸಿ ಮಾಡಿದ ಅಪಮಾನ ಎಂಬುದ ಸಾಬೀತು ಮಾಡುತ್ತದೆ ಎಂದು ನ್ಯಾ. ಅನ್ಸಾರಿ ಹೇಳಿದ್ದಾರೆ. ಐಟಮ್‌ ಎಂಬ ಪದವನ್ನು ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಉದ್ದೇಶಿ ಅವಹೇಳನಕಾರಿಯಾಗಿ ಕರೆಯುವುದಾಗಿದೆ. ಇದು ಲೈಂಗಿಕ ದುರುದ್ದೇಶ ಹೊಂದಿದ ವರ್ತನೆಯಾಗಿದೆ. ಹುಡುಗಿಯನ್ನು ‘ಐಟಮ್‌’ ಎಂದು ಕರೆಯುವುದು ಖಂಡಿತವಾಗಿಯೂ ಅವಹೇಳನವಾಗಿದೆ ಎಂದಿದ್ದಾರೆ.

    ಆರೋಪಿ ಮೇಲೆ ಸಹಾನುಭೂತಿಯನ್ನು ತೋರಿಸಲು ನಿರಾಕರಿಸಿದ ಕೋರ್ಟ್‌, ಬೀದಿ ಬದಿಯ ‘ರೋಮಿಯೊ’ಗಳಿಗೆ ತಕ್ಕ ಪಾಠ ಕಲಿಸಬೇಕು. ಮುಂದೆ ಇಂತಹ ಅಸಭ್ಯ ವರ್ತನೆ ತೋರದಂತೆ ಎಚ್ಚರಿಕೆಯಾಗಬೇಕು ಎಂದು ನ್ಯಾಯಮೂರ್ತಿ ಎ.ಜೆ. ಅನ್ಸಾರಿ ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಅಡಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply