KARNATAKA
ಕುಣಿಗಲ್ : ಜಾತ್ರೆಯಲ್ಲಿ ಬೆಂಕಿ ಕೊಂಡ ಹಾಯುವಾಗ ಆಯ ತಪ್ಪಿ ಬಿದ್ದ ಅರ್ಚಕ, ಮಗ ಮೃತ್ಯು..!

ಕುಣಿಗಲ್ : ತುಮಕೂರಿನ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದ ಶ್ರೀ ದಂಡಿನ ಮಾರಮ್ಮ ದೇವಿ ಜಾತ್ರಾ ಪ್ರಯುಕ್ತ ನಡೆದ ಬೆಂಕಿಕೊಂಡ ಹಾಯುವ ಕಾರ್ಯಕ್ರಮದಲ್ಲಿ ಬೆಂಕಿ ಕೊಂಡಕ್ಕೆ ಅರ್ಚಕ ಮತ್ತು ಆತನ ಮಗ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅರ್ಚಕ ವೆಂಕಟಪ್ಪ ಹಾಗೂ ಮಗ ಕೃಷ್ಣ ಮೂರ್ತಿಗೆ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ದೇವರನ್ನ ಹೊತ್ತು ಸಾಗುವಾಗ ಅಕಸ್ಮಿಕವಾಗಿ ಬೆಂಕಿಕೊಂಡದಲ್ಲಿ ಕಾಲು ಜಾರಿ ಅರ್ಚಕ ಹಾಗೂ ಮಗ ಬಿದ್ದು ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ರಕ್ಷಣೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಆ ಬಳಿಕ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕ ಹಾಗೂ ಅವರ ಪುತ್ರ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
