LATEST NEWS
ಕೇರಳ – ಮಹಾಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾಗೆ ಕುಲಾಯಿಸಿದ ಅದೃಷ್ಟ

ಕೇರಳ ಫೆಬ್ರವರಿ 15: ಮಹಾ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಅದೃಷ್ಟವೇ ಕುಲಾಯಿಸಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಅವಳ ಒಂದು ವಿಡಿಯೋ ಇದೀಗ ಆಕೆಗೆ ಸಿನೆಮಾದಲ್ಲಿ ಅವಕಾಶ ಹಾಗೂ ಜ್ಯುವೆಲ್ಲರಿ ಒಂದರ ರಾಯಭಾರಿಯನ್ನಾಗಿ ಮಾಡಿದೆ.
ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಹಾರಗಳನ್ನು ಮಾರಾಟ ಮಾಡಿ ರಾತ್ರೋರಾತ್ರಿ ತಾರೆಯಾದ ಮೊನಾಲಿಸಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಒಂದು ವೈರಲ್ ವಿಡಿಯೋ ಅವರ ಜೀವನವನ್ನು ಬದಲಾಯಿಸಿದೆ ಮತ್ತು ಈಗ ಮೊನಾಲಿಸಾ ಶೀಘ್ರದಲ್ಲೇ ಸಿನೆಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಮೊನಾಲಿಸಾ ನಟನಾ ತರಗತಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ.

ಕೇರಳದ ಚೆಮ್ಮನೂರ್ ಜ್ಯುವೆಲ್ಲರಿ ತನ್ನ ಪ್ರಚಾರಕ್ಕೆ ಮೊನಾಲಿಸಾಳನ್ನು ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಬಾಬಿ ಚೆಮ್ಮನೂರ್ ಮಾತನಾಡಿ, ಮೊನಾಲಿಸಾ ಶುಕ್ರವಾರ ಕೇರಳದ ಕಲ್ಲಿಕೋಟೆಗೆ ಆಗಮಿಸಲಿದ್ದಾರೆ. ಅವರನ್ನು ಕಂಪನಿಯ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗುವುದು. ಅವರಿಗೆ 15 ಲಕ್ಷ ರೂ. ಸಂಭಾವನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆಂಗ್ಲ ಮಾಧ್ಯಮ ವರದಿಗಳ ಪ್ರಕಾರ, ಮೊನಾಲಿಸಾ ತಮ್ಮ ಚೊಚ್ಚಲ ಚಿತ್ರಕ್ಕಾಗಿ 21 ಲಕ್ಷ ರೂಪಾಯಿಗಳ ಗಣನೀಯ ಸಂಭಾವನೆಗೆ ಸಹಿ ಹಾಕಿದ್ದಾರೆ. 1 ಲಕ್ಷ ರೂಪಾಯಿಗಳ ಮುಂಗಡವಾಗಿ ಪಡೆದಿದ್ದಾರೆ. ತಮ್ಮ ಜೀವನವನ್ನು ಬದಲಾಯಿಸುವ ಅವಕಾಶದ ಬಗ್ಗೆ ಮೊನಾಲಿಸಾ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ