DAKSHINA KANNADA
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಸಂಭ್ರಮ
ಪುತ್ತೂರು ಅಗಸ್ಟ್ 09: ಇಂದು ರಾಜ್ಯಾದ್ಯಂತ ನಾಗಪಂಚಮಿ ಸಂಭ್ರಮ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಸಂಭ್ರಮ ಮನೆ ಮಾಡಿದ್ದು. ಸಾವಿರಾರು ಭಕ್ತರು ಕುಕ್ಕೆ ಸುಬ್ರಹ್ಮಣ್ಯ. ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಅಭಿಷೇಕ ಮಾಡುತ್ತಿದ್ದಾರೆ.
ದೇವಳದ ನಾಗಪ್ರತಿಷ್ಠೆ ಮಂಟಪದ ನಾಗನಕಲ್ಲಿಗೆ ಭಕ್ತರು ತನು ಹಾಗೂ ಎಳನೀರು ಸಮರ್ಪಣೆ ಮಾಡಿದರು. ಊರು ಹಾಗೂ ಪರವೂರುಗಳಿಂದ ಭಕ್ತರು ಬಂದಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಭಕ್ತರಿಗೆ ಹಾಲು ಸಮರ್ಪಣೆಗೆ ಅವಕಾಶ ನೀಡಲಾಗಿತ್ತು. ಬೆಳಗಿನಿಂದಲೇ ಭಕ್ತರ ಉದ್ದ ಸರದಿ ಇತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳಿಂದ ತನು ಅರ್ಪಣೆ, ದೇವಸ್ಥಾನದ ವತಿಯಿಂದ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
You must be logged in to post a comment Login