LATEST NEWS
ನೇತ್ರಾವತಿ ನದಿಗೆ ಹಾರಿದ ಬಸ್ ಚಾಲಕ- ಸ್ಥಳೀಯರಿಂದ ರಕ್ಷಣೆ
ಮಂಗಳೂರು, ಅಕ್ಟೋಬರ್ 19 : ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕನನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೂಡಿನ ಬಳಿಯ ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಸ್ಥಳೀಯ ಯುವಕರ ತಂಡ ಆತನನ್ನು ರಕ್ಷಿಸಿದೆ. ಹಾಸನ ಜಿಲ್ಲೆಯ ಕುಮಾರ್ ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇಂದು ಬಂಟ್ವಾಳದ ಗೂಡಿನ ಬಳಿ ಹಳೆ ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿದ್ದಾನೆ.
ಇದನ್ನು ನೋಡಿದ ಗೂಡಿನ ಬಳಿಯ ಮಹಮ್ಮದ್ ಮತ್ತು ಅವರ ಸ್ನೇಹಿತರ ತಂಡ ದೋಣಿಯ ಮೂಲಕ ತೆರಳಿ ಸೇತುವೆಯ ಕಂಬದಲ್ಲಿ ಸಿಲುಕಿಕೊಂಡಿದ್ದ ಕುಮಾರ್ ನನ್ನು ರಕ್ಷಿಸಿ ಕರೆ ತಂದಿದ್ದಾರೆ. ಸದ್ಯ ಯುವಕನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂಟ್ವಾಳ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Facebook Comments
You may like
ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿದ ಕಂದಕಕ್ಕೆ ಬಿದ್ದ ಕಾರು
ಸೈಡ್ ಕೊಡದ ದಾರಿಹೋಕನಿಗೆ ನಿರ್ವಾಹಕ ಕೊಟ್ಟ ಗೂಸಾ
ಧರ್ಮಸ್ಥಳದ ಬಾಹುಬಲಿ ಬೆಟ್ಟದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬಸ್ ನಲ್ಲಿ ಯುವತಿಯ ಮೈಮುಟ್ಟಿ ಕಿರುಕುಳ ಆರೋಪ.. ಠಾಣೆಯ ಮುಂಭಾಗದಲ್ಲಿ ಬಸ್!
ರೇಪ್ ಆರೋಪಿ ಆಟೋ ಚಾಲಕನ ಕ್ಷಮೆ ಕೇಳಿದ ಪೊಲೀಸ್ ಆಯುಕ್ತ..!
ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ
You must be logged in to post a comment Login