Connect with us

LATEST NEWS

‘ನಡು ರಸ್ತೆಯಲ್ಲಿ ಕಂಗನಾಳನ್ನು ಅತ್ಯಾಚಾರ ಮಾಡಬೇಕು’ ಎಂದು ವಕೀಲ; ಮುಂದೆ ಆಗಿದ್ದೆ ಬೇರೆ…!

ಒಡಿಶಾ, ಅಕ್ಟೋಬರ್ 19 : ಬಾಲಿವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸೇರಿ ಹಲವು ಘಟನಾವಳಿಗಳಿಗೆ ಸಂಬಂಧಿಸಿದಂತೆ ಕಂಗನಾ ನೀಡಿರುವ ಹೇಳಿಕೆಗಳು ಪರ ವಿರೋಧ ಚರ್ಚೆ ಕಾರಣವಾಗುತ್ತಿವೆ. ಹೀಗಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ನವರಾತ್ರಿ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಕಂಗನಾ, ಯಾರೆಲ್ಲ ನವರಾತ್ರಿ ಪ್ರಯುಕ್ತ ಉಪವಾಸ ಮಾಡುತ್ತಿದ್ದೀರಿ. ನಾನು ಸಹ ಉಪವಾಸ ಮಾಡುತ್ತಿದ್ದೇನೆ. ಇನ್ನೊಂದು ವಿಶೇಷ ಏನೆಂದರೆ ನನ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ ಎಂದಿದ್ದರು.

ಫೋಟೋಕ್ಕೆ ಒಡಿಶಾದ ವಕೀಲ ಮೆಹಂದಿ ರೆಜಾ ಎಂಬುವವರು “ನಡುರಸ್ತೆಯಲ್ಲಿ ನಿನ್ನನ್ನು ಅತ್ಯಾಚಾರ ಮಾಡಬೇಕು” ಎಂದು ಕಮೆಂಟ್ ಹಾಕಿದ್ದರು.

ಬಳಿಕ ಆ ಕಮೆಂಟ್ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗುತ್ತಿದ್ದಂತೆ ಸ್ವತಃ ಮೆಹಂದಿ ರೆಜಾ ಪ್ರತಿಕ್ರಿಯಿಸಿದ್ದಾರೆ ಫೇಸ್ಬುಕ್ ಖಾತೆಯ ಎಡವಟ್ಟಿನಿಂದ ಈ ಘಟನೆ ನಡೆದಿದೆ ಎಂದಿದ್ದಾರೆ

ನನ್ನ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ ಆ ಖಾತೆಯ ಮೂಲಕ ಯಾರು ಕಂಗನಾ ಬಗ್ಗೆ ತುಚ್ಚವಾಗಿ ಕಾಮೆಂಟ್ ಮಾಡಿದ್ದಾರೆ. ಮಹಿಳೆಯರ ದೃಷ್ಟಿಯಲ್ಲಿ ನನ್ನ ನಿಲುವುಗಳೇ ಬೇರೆ ನನಗೂ ಇದನ್ನು ನೋಡಿ ಶಾಕ್ ಆಯ್ತು ಕೂಡಲೇ ಕ್ಷಮೆಯಾಚಿಸಿದ್ದೇನೆ ಇದರಿಂದ ಯಾರ ಭಾವನೆಗಳಿಗೆ ದಕ್ಕೆ ಆಗಿದ್ದರೆ ದಯಮಾಡಿ ನನ್ನನ್ನು ಕ್ಷಮಿಸಿ ಎಂದಿದ್ದಾರೆ