ಸಿಎಂ ಕುಮಾರಸ್ವಾಮಿ ಸರ್ವಾಧಿಕಾರಿತನಕ್ಕೆ ತಕ್ಕ ಉತ್ತರ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ

ಉಡುಪಿ ಜೂನ್ 26: ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಬೇಕಾಗುತ್ತೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಈ ವರ್ತನೆ ಖಂಡನೀಯವಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಉಡಾಫೆಯ, ಹತಾಶೆಯ, ಅತಿರೇಕದ, ಸರ್ವಾಧಿಕಾರಿತನದ ಮಾತಗಳನ್ನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಮೇಲೆ ಲಾಠಿಚಾರ್ಜ್ ಮಾಡಬೇಕಾಗುತ್ತೆ ಎಂದು ಹೇಳಿದ ಮುಖ್ಯಮಂತ್ರಿ ಕುಮಾರಸ್ವಾವಿ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಈ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಬಡವರ ಕಷ್ಟಕ್ಕೆ ಸ್ಪಂದನೆ ಕೊಡಬೇಕು ಎಂದು ಸಿ‌ಎಂ ಗೆ ಅನಿಸಿಲ್ಲ, ಸ್ವತ ಕಾರ್ಮಿಕರೇ ಇದನ್ನು ಹೇಳ್ತಾ ಇರುವುದನ್ನು ಗಮನಿಸಿದ್ದೇನೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಒಂದೇ ಸಂಸತ್ ಕ್ಷೇತ್ರದಲ್ಲಿ ನೀವು ಗೆದ್ದವರು, ಹಾಗಾದ್ರೆ ಮುಖ್ಯಮಂತ್ರಿಯಾಗಿ ಒಂದೇ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡುತ್ತೀರಾ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.

ನೀವು ಇಡೀ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ರಾಜ್ಯದ ಆರೂವರೆ ಕೋಟಿ ಜನರ ಹಕ್ಕುಗಳನ್ನು ಸಮಸ್ಯೆಗಳನ್ನು ಕೇಳಬೇಕಾದ ನೀವು ಉಢಾಫೆಯ ಮಾತು ಆಡುತ್ತಿರುವುದು ಖಂಡನೀಯ ಎಂದರು. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿಕೊಂಡವರು ಸರ್ವರನ್ನು ಸಮಾನವಾಗಿ ಕಾಣಬೇಕು, ಅದು ಬಿಟ್ಟು ಇಂತಹ ಉಡಾಫೆಯ ಮಾತು ಆಡುವುದು ಅತ್ಯಂತ ಬೇಜವಬ್ದಾರಿತನವಾಗಿದ್ದು, ಅಧಿಕಾರವೇ ಬೇಡ ಅನಿಸಿದ್ರೆ ರಾಜೀನಾಮೆ ಕೊಡುವುದೇ ಸೂಕ್ತ ಎಂದರು.

ಮುಖ್ಯಮಂತ್ರಿಯವರ ಇಂತಹ ನಡವಳಿಕೆಯಿಂದ ಕರ್ನಾಟಕದ ಜನ ಆತಂಕಿತರಾಗಿದ್ದು, ಪಕ್ಷ ನಿಮ್ಮ ವರ್ತನೆಯನ್ನು ಗಮನಿಸ್ತಾ ಇದ್ದು, ಇದೇ ರೀತಿ ಸರ್ವಾಧಿಕಾರದ ವರ್ತನೆ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತೆ ಉಡುಪಿಯಲ್ಲಿ ವಿಧಾನ ಪರಿಷತ್ತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

Facebook Comments

comments