ಉಡುಪಿ ಸೆನ್ ಅಪರಾಧ ಪೊಲೀಸರ ಕಾರ್ಯಾಚರಣೆ- 5 ಕಿಲೋ ಗಾಂಜಾ ವಶ, ಆರೋಪಿ ಬಂಧನ

ಉಡುಪಿ, ಜೂನ್ 25: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಸೆನ್ ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಪ್ರಖರ್ ಶ್ರೀ ವಾಸ್ತವ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 1.30 ಲಕ್ಷ ರೂಪಾಯಿ ಬೆಲೆ ಬಾಳುವ 5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ವಿದ್ಯಾರತ್ನ ಎನ್‍ಕ್ಲೇವ್ ಅಪಾರ್ಟ್‍ಮೆಂಟ್ ಬಳಿ, ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ.

ಈತನಿಂದ 1,30,000 ಮೌಲ್ಯದ 5 ಕಿಲೋ 280 ಗ್ರಾಂ ತೂಕದ ಗಾಂಜಾವನ್ನು ಮತ್ತು 5000 ಮೌಲ್ಯದ ಮೊಬೈಲ್ ಹ್ಯಾಂಡ್ ಸೆಟ್, 1250 ರೂ ಮೌಲ್ಯದ ತೂಕ ಸಾಧನ ಮತ್ತು 1000 ಮೌಲ್ಯದ ಟ್ರಾಲ್ ಬ್ಯಾಗ್ ಸೇರಿದಂತೆ ಒಟ್ಟು 1,36,250 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

comments