LATEST NEWS
ಬಿಜೆಪಿಯ ಗೆಲುವಿನ ಓಟಕ್ಕೆ ರಾಮನಗರದ ಶಕ್ತಿ ಕನಕಪುರದ ಬಂಡೆ ತಡೆಯಾಗಿಲ್ಲ

ಉಡುಪಿ ನವೆಂಬರ್ 10: ಬಿಜೆಪಿಯ ಗೆಲುವಿನ ಓಟಕ್ಕೆ ರಾಮನಗರದ ಶಕ್ತಿ ಕನಕಪುರದ ಬಂಡೆ ನಮಗೆ ತಡೆಯಾಗಿಲ್ಲ. ಈ ಫಲಿತಾಂಶ ಬಿಜೆಪಿಗೆ ಜನರ ಆಶೀರ್ವಾದವನ್ನು ಘಟ್ಟಿಗೊಳಿಸಿದೆ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಿಎಂ ಯಡಿಯೂರಪ್ಪ ಅವರ ವಿಶ್ವಾಸಕ್ಕೆ ಬಲ ಬಂದಿದೆ. ಬಿಜೆಪಿ, ಯಡಿಯೂರಪ್ಪ, ಮೋದಿ ಯವರ ಕೆಲಸಕ್ಕೆ ಬೆಂಬಲವನ್ನು ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಶಕ್ತಿಯುತವಾಗಿ ಕೆಲಸ ಮಾಡಲಿದೆ ಎಂದರು. ಆಡಳಿತದಲ್ಲಿ ಬಡವರ ಪರ ಘಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಈ ಫಲಿತಾಂಶ ಸಹಕಾರಿಯಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
