Connect with us

LATEST NEWS

ಬಂಡೆಕಲ್ಲು , ಟ್ರಬಲ್ ಶೂಟರ್ ಇದು ಯಾವುದೇ ನಡೆಯುವುದಿಲ್ಲ – ನಳಿನ್ ಕುಮಾರ್ ಕಟೀಲ್

ಮಂಗಳೂರು ನವೆಂಬರ್ 10: ಎರಡು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.


ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಎರಡು ಟ್ರಂಪ್ ಕಾರ್ಡ್ ಬಳಕೆ ಮಾಡಿತು. ಜಾತಿ ರಾಜಕಾರಣ ಮತ್ತು ಗೂಂಡಾಗಿರಿಯ ರಾಜಕಾರಣ ಮಾಡಿದರು. ಆದರೆ ಜನ ಅಭಿವೃದ್ಧಿ ಯ ಮುಂದೆ ಇದನ್ನು ತಿರಸ್ಕಾರ ಮಾಡಿದ್ದಾರೆ.

ಡಿಕೆಶಿವಕುಮಾರ್ ನಾನೇ ಬಂಡೆ ಕಲ್ಲು ಅಂತಾ ಪ್ರಚಾರ ಮಾಡಿದ್ರು, ಟ್ರಬಲ್ ಶೂಟರ್ ಅಂತ ಅವರೇ ಪ್ರಚಾರ ನೀಡಿದರು. ಆದರೆ ಜನ ಇದನ್ನೆಲ್ಲಾ ನಂಬುವುದಿಲ್ಲ, ಇವತ್ತು ಯಾರು ಬಂಡೆ ಅಂತಾ ಗೊತ್ತಾಗಿದೆ. ಬಿಜೆಪಿ ಮತಗಟ್ಟೆಯ ಕೆಲಸವನ್ನು ಮಾಡಿದೆ
ಮತದಾರನ ಒಲವನ್ನು ಪಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Facebook Comments

comments