Connect with us

    LATEST NEWS

    ಪಟಾಕಿ ಸಿಡಿಸಿ ಸಂಭ್ರಮದಿಂದ ದೀಪಾವಳಿ ಆಚರಿಸಿ ಎಂದು ಕರೆ ನೀಡಿದ ಮಧ್ಯಪ್ರದೇಶ ಸಿಎಂ

    ಮಧ್ಯಪ್ರದೇಶ ನವೆಂಬರ್ 10: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ನೆಪದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಸ್ವತಹ ಕೇಂದ್ರ ಸರಕರಾವೇ ಸೋಂಕಿತರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಸಿಡಿಸದಿರುವುದು ಒಳ್ಳೆಯದು. ಈ ವರ್ಷದ ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಹಿನ್ನಲೆ ಹಲವು ರಾಜ್ಯಗಳು ಈಗಾಗಲೇ ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಿವೆ.


    ಆದರೆ ಮಧ್ಯ ಪ್ರದೇಶದ ಮುಖ್ಯಮಂತ್ರಿಗಳು ಮಾತ್ರ ಪಟಾಕಿ ಹೊಡೆದು ಸಂಭ್ರಮಿಸಿ ಎಂದು ಸ್ವತಃ ಕರೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಪಟಾಕಿ ಬ್ಯಾನ್​ ಇಲ್ಲ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ಚೀನಾದ ಪಟಾಕಿಯನ್ನು ಸಿಡಿಸಬೇಡಿ. ನಾವು ಎಂದಿಗೂ ಸಂತೋಷವನ್ನು ನಿರ್ಬಂಧಿಸಲಾಗದು. ಭಗವಾನ್​ ಶ್ರೀ ರಾಮ ಅಯೋಧ್ಯೆಗೆ ಮರಳಿದ್ದಾನೆ. ಹಾಗಾಗಿ ಲಘು ಪಟಾಕಿ ಸಿಡಿಸಿ ಮತ್ತು ಈ ವರ್ಷದ ದೀಪಾವಳಿಯನ್ನು ಆಡಂಭರದಿಂದ ಆಚರಿಸಿ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.


    ಎಲ್ಲ ರಾಜ್ಯಗಳು ಪಟಾಕಿ ನಿರ್ಬಂಧದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ಇನ್ನೂ ಏಕೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜನಸಾಮಾನ್ಯರೊಬ್ಬರು ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಚೌಹಾಣ್​, ಪಟಾಕಿಗೆ ನಿರ್ಬಂಧವಿಲ್ಲ ಎನ್ನುವುದನ್ನು ಸ್ಪಷ್ಟೀಕರಿಸಿದ್ದಾರೆ.  ಈ ಮೂಲಕ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ವಾಯುಮಾಲಿನ್ಯದ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ.

    https://twitter.com/ChouhanShivraj/status/1325806825887813635

    Share Information
    Advertisement
    Click to comment

    You must be logged in to post a comment Login

    Leave a Reply