LATEST NEWS
ಜೆರಾಕ್ಸ್ ಡಿಎಲ್ ನೀಡಿದ್ದಕ್ಕೆ ಯುವಕನ ಮೇಲೆ ಕೋಟ ಪೊಲೀಸರ ದರ್ಪ..ಯುವಕನ ತಾಯಿಯ ಮೇಲೂ ಕೈ ಮಾಡಿದ ಆರೋಪ….!!
ಉಡುಪಿ ಜನವರಿ 28: ವಾಹನ ದಾಖಲೆ ತಪಾಸಣೆ ಸಂದರ್ಭ ಜೆರಾಕ್ಸ್ ಡಿಎಸ್ ನೀಡಿದ್ದಕ್ಕೆ ಉಡುಪಿ ಜಿಲ್ಲೆಯ ಕೋಟ ಪೊಲೀಸರು ಯುವಕನೊಬ್ಬನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸೋಮವಾರದಂದು ಕೋಟ ಮೂರು ಕೈ ಮೂಲಕ ಸಾಯ್ಬರಕಟ್ಟೆ ಗೆ ತೆರಳುತ್ತಿದ್ದ ವೇಳೆ ತನ್ನ ಮಗನಿಗೆ ಪೊಲೀಸರು ಹಲ್ಲೆ ನಡೆಸಿದ್ದಾಗಿ ಯುವಕನ ತಾಯಿ ಶಾರದಾ ಆರೋಪ ಮಾಡಿದ್ದಾರೆ. ತಾನು ಹಾಗೂ ತನ್ನ ಮಗ ಪ್ರಶಾಂತ್ ಔಷಧ ತೆಗೆದುಕೊಂಡು ಬೈಕ್ ನಲ್ಲಿ ಬರುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ದಾಖಲೆಗಳ ಪರೀಶೀಲನೆ ಕರ್ತವ್ಯದಲ್ಲಿ ಕೋಟ ಪೊಲೀಸ್ ಸಬ್ ಇನ್ಸ್ಪೇಕ್ಟರ್ ಸಂತೋಷ್ ಬಿ.ಪಿ. ಮತ್ತು ಸ್ಟೇಶನ್ ಎಸ್ ಬಿ ರಾಜು ಎಂಬವರು, ಪ್ರಶಾಂತ್ ಬೈಕ್ ತಡೆದು ದಾಖಲೆ ಕೇಳಿದ್ದಾರೆ.
ಒರಿಜಿನಲ್ ದಾಖಲೆ ಮನೆಯಲ್ಲಿದ್ದ ಕಾರಣ ವಾಹನದ ದಾಖಲೆಯ ಝೆರಾಕ್ಸ್ ನ್ನು ಪ್ರಶಾಂತ್ ಪೊಲೀಸ್ ರಿಗೆ ನೀಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಪೊಲೀಸ್‍ರು ಪ್ರಶಾಂತ್ ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಶಾಂತ್ ಗೆ ಕೋಟ ಎಸೈ ಮತ್ತು ಎಸ್ ಬಿ ಮನಸೋ ಇಚ್ಛೆ ಥಳಿಸಿದ್ದಾರೆ. ಇದನ್ನು ತಡೆಯಲು ಬಂದ ಪ್ರಶಾಂತ್ ತಾಯಿ ಶಾರದ ಅವರಿಗೂ ಹಲ್ಲೆ ಮಾಡಿದ್ದಾರೆ. ಪ್ರಶಾಂತ್ ನನ್ನು ಅರೆಸ್ಟ್ ಮಾಡಿ ಕರ್ತವ್ಯ ಲೋಪದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ರಿಂದ ಹಲ್ಲೆಗೊಳಗಾದ ಯುವಕನ ತಾಯಿ ಶಾರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ವಿಚಾರವಾಗಿ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಿದ್ದಾರೆ.