Connect with us

KARNATAKA

ಪ್ರೀತಿ ನಿರಾಕರಿಸಿದ ಯುವತಿಯನ್ನು ಹಾಡು ಹಗಲೇ ಕೊಚ್ಚಿ ಕೊಲೆಗೈದ ಪಾಗಲ್ ಪ್ರೇಮಿ

ಹಾಸನ ಜನವರಿ 28 : ಪ್ರೀತಿ ನಿರಾಕರಿಸದಳೆಂಬ ಕಾರಣಕ್ಕೆ ಯುವತಿಯನ್ನು ನಡು ರಸ್ತೆಯಲ್ಲಿ ಹಾಡುಹಗಲೇ ಪಾಗಲ್ ಪ್ರೇಮಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ.


ಹೇಮಂತ್ (25) ಕೊಲೆ ಮಾಡಿದ ಆರೋಪಿಯಾಗಿದ್ದು, ಸಕಲೇಶಪುರ ತಾಲೂಕಿನ ಬಾಳೆಗದ್ದೆ ಸಮೀಪದ ಸಿದ್ದಾಪುರ ಗ್ರಾಮದ ಸುಶ್ಮಿತಾ (21) ಕೊಲೆಯಾದ ಯುವತಿ. ಪ್ರೀತಿ ನಿರಾಕರಣೆಯೇ ಕೊಲೆಗೆ ಕಾರಣ ಎನ್ನಲಾಗಿದೆ.


ಗುರುವಾರದಂದು ಯುವತಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಏಕಾಏಕಿ ಆಕೆಯ ಮೇಲೆ ಹೇಮಂತ್​ ದಾಳಿ ನಡೆಸಿದ್ದಾನೆ. ಮಚ್ಚಿನಿಂದ ಆಕೆಯನ್ನು ಮನಬಂದಂತೆ ಕೊಚ್ಚಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತ ಸ್ರಾವವಾದ ಹಿನ್ನೆಲೆಯಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

ಘಟನೆ ನಡೆದ ಬಳಿಕ ಆರೋಪಿ ಹೇಮಂತ್ ತಲೆಮರೆಸಿಕೊಂಡಿದ್ದಾನೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ರವಾನಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು ದೂರಿನನ್ವಯ ತನಿಖೆ ಮುಂದುವರಿಸಿದ್ದಾರೆ