LATEST NEWS
ಕೋಟ ಶ್ರೀ ಅಮೃತೇಶ್ವರಿ ದೇವಿಗೆ ತುಲಾಭಾರ ಸೇವೆ ನೀಡಿದ ಮುಸ್ಲಿಂ ಕುಟುಂಬ
ಉಡುಪಿ ಮಾರ್ಚ್ 18:ಕರಾವಳಿ ಹಿಂದಿನಿಂದಲೂ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾದ ಪ್ರದೇಶವಾಗಿದ್ದು. ಇದಕ್ಕೆ ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ನಿದರ್ಶನಗಳನ್ನು ನೀಡಬಹುದು.
ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ನೇಮ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಅನಾರೋಗ್ಯ ಪೀಡಿತವಾದ ಮಗುವಿಗೆ ಕೊರಗಜ್ಜ ಅಭಯ ನೀಡಿದ ವಿಡಿಯೋ ಒಂದು ವೈರಲ್ ಆಗಿತ್ತು, ಈಗ ಅದೇ ರೀತಿಯ ಇನ್ನೊಂದು ಘಟನೆ ನಡೆದಿದ್ದು, ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬ ಒಂದು ತುಲಾಭಾರ ಸೇವೆ ಮಾಡಿಸುವ ಮೂಲಕ ಹರಕೆ ಸಲ್ಲಿಸಿದೆ.
ಕೋಟ ಶ್ರೀ ಅಮೃತೇಶ್ವರಿ ದೇವಾಲಯವು ಈ ಭಾಗದ ಶಕ್ತಿ ಕ್ಷೇತ್ರವಾಗಿದ್ದು, ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡುತ್ತಾರೆ. ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ಬ್ರಹ್ಮಾವರ ತಾಲೂಕಿನ ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬ ಹರಕೆ ಹೊತ್ತಿದ್ದರು. ಸದ್ಯ ಹರಕೆ ತೀರಿಸುವ ಸಲುವಾಗಿ ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡಿದ್ದಾರೆ.