Connect with us

    LATEST NEWS

    ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ..24 ಗಂಟೆಯಲ್ಲಿ 35,871 ಮಂದಿಗೆ ಕೊರೊನಾ ಸೊಂಕು..!!

    ನವದೆಹಲಿ ಮಾರ್ಚ್ 18 : ಕೊರೊನಾ ಲಸಿಕೆ ಅಭಿಯಾನದ ಬೆನ್ನಲೆ ದೇಶದಲ್ಲಿ ಕೊರೊನಾದ ಎರಡನೆ ಅಲೆ ಕಾಣಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಬರೋಬರಿ 35,871 ಸೋಂಕು ಪ್ರಕರಣಗಳು ಪತ್ತೆಯಾಗಿದೆ.


    35,871 ಸೋಂಕು ಪ್ರಕರಣ ದಾಖಲಾಗುವ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,14,74,605ಕ್ಕೆ ಏರಿಕೆಯಾಗಿದೆ. ಕಳೆದ ಎಂಟು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಏರುಮುಖದತ್ತ ಸಾಗಿರುವುದರಿಂದ ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಎರಡೂವರೆ ಕೋಟಿ ಗಡಿ ದಾಟಿದೆ.


    ಸೋಂಕು ಪ್ರಮಾಣ ಶೇ.2.20ರಷ್ಟು ಹೆಚ್ಚಿರುವುದರಿಂದ ಚೇತರಿಕೆ ಪ್ರಮಾಣ ಶೇ.96,41ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖವಾಗಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 172 ಮಂದಿ ಬಲಿಯಾಗುವ ಮೂಲಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,59,216ರಷ್ಟು ಏರಿಕೆಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply