LATEST NEWS
ಕೇರಳ – ಗೋ ಬ್ಯಾಕ್ ಎಂದ ಎಸ್ಎಫ್ಐ ಕಾರ್ಯಕರ್ತರ ಎದುರೇ ನಿಂತು ಅವಾಜ್ ಹಾಕಿದ ರಾಜ್ಯಪಾಲ ಆರಿಫ್ ಮೊಹಮ್ಮದ್
ಕೊಲ್ಲಂ ಜನವರಿ 27 : ಕೇರಳದಲ್ಲಿ ರಾಜ್ಯಪಾಲರು ಹಾಗೂ ಎಸ್ಎಫ್ಐ ಕಾರ್ಯಕರ್ತರ ನಡುವೆ ನಡೆಯುತ್ತಿರುವ ಗಲಾಟೆ ಮುಂದುವರೆದಿದ್ದು, ಕೇರಳದಲ್ಲಿ ಕಾರ್ಯಕ್ರಮವೊಂದರಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ ನಂತರ ರಾಜ್ಯಪಾಲ ಆರಿಫ್ ಮೊಹಮ್ಮದ್ ಕಾರಿನಿಂದ ಇಳಿದು ಕಾರ್ಯಕರ್ತರ ಎದುರೇ ಹೋಗಿ ಅವಾಜ್ ಹಾಕಿದ ಘಟನೆ ನಡೆದಿದ್ದು, ಕೊನೆಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೂ ಛೀಮಾರಿ ಹಾಕಿ ತನ್ನ ಸಹೋದ್ಯೋಗಿಗೆ ಪ್ರಧಾನಿಗೆ ಕರೆ ಮಾಡಿ ಮಾತನಾಡುವಂತೆ ಹೇಳಿದರು.
ಕೊಲ್ಲಂನ ನಿಲಮೇಲ್‌ನಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ನಂತರ, ರಾಜ್ಯಪಾಲರು ತಮ್ಮ ಕಾರನ್ನು ನಿಲ್ಲಿಸಿ, ಕಾರಿನಿಂದ ಇಳಿದು, ಹತ್ತಿರದ ಚಹಾ ಅಂಗಡಿಯಿಂದ ಕುರ್ಚಿಯನ್ನು ತೆಗೆದುಕೊಂಡು ರಸ್ತೆ ಬದಿಯ ಧರಣಿ ಕುಳಿತರು.
ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಎಸ್‌ಎಫ್‌ಐ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ರಾಜ್ಯಪಾಲರು ಆರೋಪಿಸಿದರು. ಹೊರಬಿದ್ದಿರುವ ವೀಡಿಯೋದಲ್ಲಿ ಆರಿಫ್ ಖಾನ್ ಅವರು ತಮ್ಮ ಸಹೋದ್ಯೋಗಿಗೆ ಅಮಿತ್ ಶಾ ಸಾಹೇಬರೊಂದಿಗೆ ಮಾತನಾಡುವಂತೆ ಹೇಳಿದರು.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಐಪಿಎಸ್ ಅಧಿಕಾರಿಯೊಬ್ಬರಿಗೆ ಛೀಮಾರಿ ಹಾಕುತ್ತಾ ಇಂಗ್ಲಿಷ್‌ನಲ್ಲಿ, ‘ಇಲ್ಲ ನಾನು ಇಲ್ಲಿಂದ ಹಿಂತಿರುಗುವುದಿಲ್ಲ. ನೀವು (ಪೊಲೀಸರು) ಅವರಿಗೆ ಇಲ್ಲಿ ಭದ್ರತೆ ನೀಡಿದ್ದೀರಿ, ಎಸ್‌ಎಫ್‌ಐ ಪೊಲೀಸ್ ರಕ್ಷಣೆ ನೀಡಲಾಗಿದೆ. ನಾನು ಇಲ್ಲಿಂದ ಹೋಗುವುದಿಲ್ಲ, ಪೊಲೀಸರೇ ಕಾನೂನು ಉಲ್ಲಂಘಿಸಿದರೆ ಕಾನೂನನ್ನು ಯಾರು ಜಾರಿಗೊಳಿಸುತ್ತಾರೆ? ಎಂದು ಪ್ರಶ್ನಿಸಿದರು.
केरल : पुलिस SFI का विरोध नहीं रोक पाई तो भड़क गए केरल के गवर्नर आरिफ मोहम्मद ख़ान।
गवर्नर ने सड़क पर ही कुर्सी डालकर जताया विरोध।#Kerala #SFI
pic.twitter.com/LsIwgE6vqh— Ameet Kush (@AmeetKush) January 27, 2024