Connect with us

LATEST NEWS

ಕೋಳಿ ವಿಚಾರದಲ್ಲಿ ದೊಣ್ಣೆಯಲ್ಲಿ ಬಡಿದಾಡಿಕೊಂಡ ಅಕ್ಕಪಕ್ಕದ ಮನೆಯವರು ವಿಡಿಯೋ ವೈರಲ್

ಉಡುಪಿ : ಕೋಳಿ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರು ಹೊಡೆದಾಡಿಕೊಂಡ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಮನೆಯ ಕೋಳಿ ಅವರ ಮನೆಗೆ ಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡೂ ಕುಟುಂಬದ ನಡುವೆ ನಡೆದ ಮಾರಾಮಾರಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ ಉಡುಪಿಯಲ್ಲಿ ನಡೆದಿದೆ.


ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.  ರವಿರಾಜ ಶೆಟ್ಟಿ ಎಂಬವರ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಇದೇ ವಿಚಾರವಾಗಿ ಪ್ರಾರಂಭವಾದ ಮಾತು ನಂತರ ಜಗಳ ಶುರುವಾಗಿದೆ. ಕೊನೆಗೆ ದೊಣ್ಣೆ ತೆಗೆದುಕೊಂಡು ವಾರಿಜಾ ಅವರ ಮೇಲೆ ರವಿರಾಜ್​ ಶೆಟ್ಟಿ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.


ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣ. ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾನೆ ರವಿರಾಜ್ ಶೆಟ್ಟಿ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.

ಕೋಳಿ ಜಗಳದ ಹಿಂದೆ ಎರಡೂ ಕುಟುಂಬದ ನಡುವೆ ಇರುವ ಹಳೆಯ ವೈಷಮ್ಯ ಇರಬಹುದು ಎನ್ನಲಾಗಿದೆ. ಈ ಕುಟುಂಬದ ನಡುವೆ ಜಮೀನಿನ ತಗಾದೆ ಇದ್ದು, ಇದರಿಂದಾಗಿ ಕೋಳಿಯ ನೆಪದಿಂದ ಜಗಳ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *