LATEST NEWS
ಕೋಳಿ ವಿಚಾರದಲ್ಲಿ ದೊಣ್ಣೆಯಲ್ಲಿ ಬಡಿದಾಡಿಕೊಂಡ ಅಕ್ಕಪಕ್ಕದ ಮನೆಯವರು ವಿಡಿಯೋ ವೈರಲ್
ಉಡುಪಿ : ಕೋಳಿ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರು ಹೊಡೆದಾಡಿಕೊಂಡ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಮನೆಯ ಕೋಳಿ ಅವರ ಮನೆಗೆ ಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡೂ ಕುಟುಂಬದ ನಡುವೆ ನಡೆದ ಮಾರಾಮಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ರವಿರಾಜ ಶೆಟ್ಟಿ ಎಂಬವರ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಇದೇ ವಿಚಾರವಾಗಿ ಪ್ರಾರಂಭವಾದ ಮಾತು ನಂತರ ಜಗಳ ಶುರುವಾಗಿದೆ. ಕೊನೆಗೆ ದೊಣ್ಣೆ ತೆಗೆದುಕೊಂಡು ವಾರಿಜಾ ಅವರ ಮೇಲೆ ರವಿರಾಜ್ ಶೆಟ್ಟಿ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣ. ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾನೆ ರವಿರಾಜ್ ಶೆಟ್ಟಿ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.
ಕೋಳಿ ಜಗಳದ ಹಿಂದೆ ಎರಡೂ ಕುಟುಂಬದ ನಡುವೆ ಇರುವ ಹಳೆಯ ವೈಷಮ್ಯ ಇರಬಹುದು ಎನ್ನಲಾಗಿದೆ. ಈ ಕುಟುಂಬದ ನಡುವೆ ಜಮೀನಿನ ತಗಾದೆ ಇದ್ದು, ಇದರಿಂದಾಗಿ ಕೋಳಿಯ ನೆಪದಿಂದ ಜಗಳ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.
Facebook Comments
You may like
-
ಗೋಮಾಳದ ಭೂಮಿಯನ್ನು ಗೋಶಾಲೆಗಳಿಗೆ ನೀಡಲು ಕಂದಾಯ ಮಂತ್ರಿ ಅಸ್ತು
-
ದೊಡ್ಡಣಗುಡ್ಡೆ ರಹ್ಮಾನಿಯಾ ಮಸೀದಿಯಲ್ಲಿ ಉರೂಸ್ ಸಡಗರ
-
ಕೋಳಿ ಕಳ್ಳರಿದ್ದಾರೆ ಎಚ್ಚರಿಕೆ!!! ಭಿಕ್ಷುಕರ ನೆಪದಲ್ಲಿ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಳಿ ಕದಿಯುವ ಕಳ್ಳರನ್ನು ನೋಡಿದಿರಾ?
-
ಲಾರಿ ಚಾಲಕನ ಅವಾಂತರ-ಜನಸಾಮಾನ್ಯ ಪ್ರಾಣ ಉಳಿಸಿದ ಕಾಪು ಎಸೈ ರಾಘವೇಂದ್ರ
-
ಕುಂಜಿಬೆಟ್ಟು ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ ನಾಗರಹಾವಿನ ರಕ್ಷಣೆ
-
ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್
You must be logged in to post a comment Login