Connect with us

    KARNATAKA

    ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಗಂಡ

    ಕೋಲಾರ ಜೂನ್ 25: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತನ್ನ ಸ್ನೇಹಿತನನ್ನು ವ್ಯಕ್ತಿಯೊಬ್ಬ ಕತ್ತು ಸೀಳಿ ರಕ್ತವನ್ನು ಕುಡಿದ ಭೀಭತ್ಸ ಘಟನೆ ಕೋಲಾರದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.


    ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಚಿಂತಾಮಣಿಯ ಗಾಂಧಿನಗರದ ವಿಜಯ್ ಎಂಬಾತ ಚೇಳೂರು ತಾಲ್ಲೂಕಿನ ಮಂಡಪಲ್ಲಿಯ ಮಾರೇಶ್ ಎಂಬುವವರ ಕತ್ತನ್ನು ಕೊಯ್ದು ರಕ್ತ ಕುಡಿದ್ದಾನೆ. ಕೃತ್ಯವನ್ನು ವಿಜಯ್ ವಿಡಿಯೊ ಮಾಡಿಸಿದ್ದಾನೆ.

    ವಿಜಯ್ ಮತ್ತು ಮಾರೇಶ್ ಸ್ನೇಹಿತರಾಗಿದ್ದು ಬಟ್ಟೆ ವ್ಯಾಪಾರ ಮಾಡುತಿದ್ದರು. ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್​ ಹಲ್ಲೆಗೊಳಗಾದ ವ್ಯಕ್ತಿ. ವಿಜಯ್ ಪತ್ನಿ ಮಾಲಾ ಜೊತೆ ಮಾರೇಶ್​ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ವಿಜಯ್ ಮಾರೇಶ್​​​ನನ್ನು ​​ಸಿದ್ದೇಪಲ್ಲಿ ಕ್ರಾಸ್ ಬಳಿ ಕರೆಸಿಕೊಂಡು ಚಾಕುವಿನಿಂದ ಕತ್ತು ಸೀಳಿ ರಕ್ತ ಕುಡಿದಿದ್ದಾನೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸದ್ಯ ಈ ಭೀಭತ್ಸ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿ ವಿಜಯ್​ನನ್ನು ಕೆಂಚಾರ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಮಾರೇಶ್ ಚಿಕಿತ್ಸೆ ಪಡೆದು ಮನೆಗೆ ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply