BELTHANGADI
ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್
ಬೆಳ್ತಂಗಡಿ ಜೂನ್ 25: ಖ್ಯಾತ ಕ್ರಿಕೆಟಿಗ ಕರಾವಳಿಗ ಕೆ.ಎಲ್ ರಾಹುಲ್ ಇಂದು ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವ ಕೆ.ಎಲ್ ರಾಹುಲ್ ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಮುಂದಿನ ಏಷ್ಯಾಕಪ್ ವೇಳೆಗೆ ಅವರು ತಂಡ ಸೇರುವ ನಿರೀಕ್ಷೆಯಿದೆ. ಮಂಗಳೂರು ಮೂಲದ ಕ್ರಿಕೆಟಿಗ ರಾಹುಲ್ ಕೆಲವೇ ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿದ್ದರು.
You must be logged in to post a comment Login