ಧರ್ಮಸ್ಥಳ, ಎಪ್ರಿಲ್ 28: ಮರ ಕಡಿಯುತ್ತಿದ್ದ ವೇಳೆ ಮಹಿಳೆಯೋರ್ವರ ತಲೆಗೆ ಆಕಸ್ಮಿಕವಾಗಿ ಮರ ಬಿದ್ದ ಕಾರಣ ಮಹಿಳೆಯು ಸ್ಥಳದಲ್ಲಿಯೇ ಸಾವಿಗೀಡಾದ ಧಾರುಣ ಘಟನೆ ಕೊಕ್ಕಡದಲ್ಲಿ ನಡೆದಿದೆ.

ಮೃತರನ್ನು ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ (55 )ಎಂದು ಗುರುತಿಸಲಾಗಿದೆ. ಇಲ್ಲಿನ ಹಳ್ಳಿಂಗೇರಿ ಕ್ವಾರ್ಟಸ್ ಬಳಿ ಮರವೊಂದರ ಗೆಲ್ಲುಗಳನ್ನು ತೆಗೆಯುವ ವೇಳೆ ಈ ದುರಂತ ನಡೆದಿದೆ ಎನ್ನಲಾಗಿದೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information