
ಮಂಗಳೂರು, ಎಪ್ರಿಲ್ 28: ಬಿಜೆಪಿ ಚುನಾವಣಾ ಪ್ರಚಾರದ ಭಾಗವಾಗಿ ನಾಳೆ (ಏಪ್ರಿಲ್ 29) ನಗರದಲ್ಲಿ ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ರೋಡ್ ಶೋ ನಡೆಯಲಿದೆ.
ಸಂಜೆ 5 ಗಂಟೆಗೆ ಸರಿಯಾಗಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಿಂದ ಆರಂಭವಾಗುವ ರೋಡ್ ಶೋ, ಕೆ.ಎಸ್. ರಾವ್ ರಸ್ತೆ ಮುಖಾಂತರ ಸಾಗಿ ಮಂಜೇಶ್ವರ ಗೋವಿಂದ ಪೈ (ನವಭಾರತ್) ಸರ್ಕಲ್ ನಲ್ಲಿ ಮುಕ್ತಾಯವಾಗಲಿದೆ.
ಪಕ್ಷದ ಎಲ್ಲಾ ಮುಖಂಡರುಗಳು, ಕಾರ್ಯಕರ್ತರು, ಹಿತೈಷಿಗಳು, ಮಾಧ್ಯಮ ಮಿತ್ರರು, ಸಾರ್ವಜನಿಕ ಬಂಧುಗಳು, ಆಗಮಿಸುವಂತೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಡಿ.ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





