DAKSHINA KANNADA
ಮೋದಿ ಮಾದರಿ, ಯೋಗಿ ಮಾದರಿ ಬಗ್ಗೆ ಮಾತನಾಡುತ್ತಾರೆ, ಅಂಥ ಮಾದರಿ ನೋಡಬೇಕಾದರೆ ಅರುಣ್ ಕುಮಾರ್ ಪುತ್ತಿಲರಿಂದ ಮಾತ್ರ ಸಾಧ್ಯ: ಅಕ್ಷಯ ಗೋಖಲೆ
ಪುತ್ತೂರು, ಎಪ್ರಿಲ್ 28: ಎಲ್ಲರೂ ಚುನಾವಣೆ ಬಂದಾಗ ನಾವು ಮೋದಿ ಮಾದರಿ, ಯೋಗಿ ಮಾದರಿ ತರುತ್ತೇವೆ ಎಂದು ಹೇಳುತ್ತಾರೆ. ಆದರೆ ನಾವೆಂದೂ ಆ ಮಾದರಿಯನ್ನು ಪುತ್ತೂರಿನಲ್ಲಿ ನೋಡಿಲ್ಲ ಎಂದು ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಹೇಳಿದರು.
ಎಪ್ರಿಲ್ 28 ರಂದು ಪುತ್ತೂರಿನ ಸುಭದ್ರ ಸಭಾಭವನದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ನಡೆದ ಸೀತಾ ಪರಿವಾರ ಸಮಾವೇಶವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಗ್ರಾಮಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೆ ಎಲ್ಲರೂ ನಾವು ಮೋದಿ ಮಾದರಿ,ಯೋಗಿ ಮಾದರಿ, ಗುಜರಾತ್ ಮಾದರಿ, ಯುಪಿ ಮಾದರಿ ತರುತ್ತೇವೆ ಅನ್ನುತ್ತಾರೆ.
ಆದರೆ ನಾವು ಪುತ್ತೂರಿನಲ್ಲಿ ಈವರೆಗೂ ಈ ಮಾದರಿಯನ್ನು ನೋಡಿಲ್ಲ. ನಮಗೆ ಪುತ್ತೂರಿನಲ್ಲಿ ಬುಲ್ಡೋಜರ್ ನೋಡಬೇಕೆಂಬ ಆಸೆಯಿದೆ. ಆ ಆಸೆಯನ್ನು ಅರುಣ್ ಕುಮಾರ್ ಪುತ್ತಿಲರಿಂದ ಮಾತ್ರ ತರಲು ಸಾಧ್ಯ ಎಂದು ಅವರು ಕಾರ್ಯಕರ್ತರಿಗಾಗಿ ಹಗಲಿರುಳು ದುಡಿಯುವ ಅರುಣ್ ಪುತ್ತಿಲರನ್ನು ಮಹಿಳೆಯರು ಬೆಂಬಲಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
You must be logged in to post a comment Login