LATEST NEWS
ಪಶ್ಚಿಮಘಟ್ಟಕ್ಕೆ ಕೊಡಲಿ ಹಾಕಿದ ಸರಕಾರಕ್ಕೆ ಸರಿಯಾಗೇ ಏದಿರೇಟು ನೀಡಿದ ಪ್ರಕೃತಿ

ಪಶ್ಚಿಮಘಟ್ಟಕ್ಕೆ ಕೊಡಲಿ ಹಾಕಿದ ಸರಕಾರಕ್ಕೆ ಸರಿಯಾಗೇ ಏದಿರೇಟು ನೀಡಿದ ಪ್ರಕೃತಿ
ಮಂಗಳೂರು ಅಗಸ್ಟ್ 19: ಎತ್ತಿನಹೊಳೆ ಯೋಜನೆ ಮೂಲಕ ಪಶ್ಚಿಮ ಘಟ್ಟಕ್ಕೆ ಕೊಡಲಿ ಏಟು ಕೊಟ್ಟ ಸರಕಾರಕ್ಕೆ ಪ್ರಕೃತಿ ಸರಿಯಾಗಿಯೇ ತಿರುಗೇಟು ನೀಡಿದೆ.ಖ್ಯಾತ ವಿಜ್ಞಾನಿಗಳ ಯೋಜನೆ ವಿರುದ್ದ ತಮ್ಮ ವರದಿ ಸಲ್ಲಿಸಿದರು ಕ್ಯಾರೆ ಅನ್ನದೇ ಸರಕಾರ ಯೋಜನೆ ಜಾರಿಗೊಳಿಸಲು ಹೊರಟಿದ ಪರಿಣಾಮ ಈಗ ಪಶ್ಚಿಮ ಘಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜನರ ಜೀವನ, ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿಯುಂಟಾಗಿದೆ.
ಪರಿಸರದ ವಿರುದ್ಧವಾಗಿ ಕೈಗೊಂಡ ಎತ್ತಿನಹೊಳೆ ಯೋಜನೆ ಜಾರಿಯಾದರೆ ಏನೆಲ್ಲಾ ಅನಾಹುತಗಳು ಉಂಟಾಗಬಹುದು ಎಂದು ಪರಿಸರವಾದಿಗಳು ಸರಕಾರಕ್ಕೆ ಎಚ್ಚರಿಸಿದ್ದರೋ ಅದೇಲ್ಲಾ ಈಗ ಅವರ ಕಣ್ಣ ಮುಂದೆ ನಡೆಯತ್ತಿದೆ. ಯೋಜನೆ ಜಾರಿಗೆ ಯಾವೆಲ್ಲಾ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದರೋ ಈಗ ಅದೇ ಪ್ರತಿನಿಧಿಗಳು ಸಂತ್ರಸ್ಥರ ಸಹಾಯಕ್ಕೆ ಧಾವಿಸಿದ್ದಾರೆ.

ನೇತ್ರಾವತಿ ನದಿ ತಿರುವು ಯೋಜನೆ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣಹೋಮ, ಕಲ್ಲಿನ ಸ್ಫೋಟ, ಬೆಟ್ಟಗುಡ್ಡಗಳನ್ನು ಕಡಿದು ಸಮತಟ್ಟುಗೊಳಿಸಿದ್ದರಿಂದ ಅಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ ಎಂದು ಅಲ್ಲಿನ ನಾಗರಿಕರು ಆರೋಪಿಸಿದ್ದಾರೆ.
ನಿಸರ್ಗದ ವಿರುದ್ಧ ಕೈಗೊಂಡ ಅಭಿವೃದ್ಧಿ ಹೆಸರಿನ ಕಾಮಗಾರಿಯಿಂದಾಗಿ ಈಗ ಭೂಕುಸಿತಂದಹ ಸಮಸ್ಯೆಯ ಪರಿಸ್ಥಿತಿ ಬಂದಿದೆ ಎಂಬ ಅನುಮಾನವನ್ನು ಸ್ಥಳೀಯ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಶಿರಾಡಿ ಘಾಟ್‌ನಲ್ಲಿ ಸತತ ಸಂಭವಿಸುತ್ತಿರುವ ಭೂಕುಸಿತ ಮತ್ತು ಮಳೆ ಸಂಬಂಧಿತ ಅನಾಹುತಗಳು ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ಪರಿಣಾಮಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ.
ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಹೆಸರಿನಲ್ಲಿ ಹಲವರು ದಟ್ಟ ಕಾಡಿನೊಳಗೆ ಸ್ಫೋಟಕ ಬಳಸಿ ಕಲ್ಲಿನ ಕ್ವಾರಿ ನಡೆಸುತ್ತಿದ್ದಾರೆ. ಸಾವಿರಾರು ಮರ ಕಡಿಯಲಾಗಿದೆ. ಬೃಹತ್ ಜೆಸಿಬಿ ತರಿಸಿ ಗುಡ್ಡ ಅಗೆಯಲಾಗಿದೆ. ಆದರೆ ಅರಣ್ಯಾಧಿಕಾರಿಗಳು ಆ ಬಗ್ಗೆ ಮಾತೆತ್ತುತ್ತಿಲ್ಲ.
ಪ್ರಸ್ತುತ ಪಶ್ಚಿಮ ಘಟ್ಟದಲ್ಲಿ ಎತ್ತಿನಹೊಳೆ ಯೋಜನೆಗಾಗಿ ಕಾಡುಮನೆ,ಹೆಬ್ಬಸಾಲೆ ಮುಂತಾದೆಡೆ ಗುಡ್ಡಗಳನ್ನು ಕತ್ತರಿಸಲಾಗಿದೆ. ದಟ್ಟ ಕಾನನದೊಳಗೆ ಕಲ್ಲುಗಳನ್ನು ಸ್ಪೋಟಿಸಲಾಗಿದೆ. ಯೋಜನೆಗಾಗಿ ಸಾವಿರಾರು ಹೆಕ್ಟೇರ್ ಅರಣ್ಯ ಕಡಿದು ಹಾಕಿ ಜೆಸಿಬಿಯಿಂದ ಅಗೆಯಲಾಗಿದೆ.
ಪರಿಸರದ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡದೇ ಯೋಜನೆ ಜಾರಿಗೊಳಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಶಿರಾಡಿ ಘಾಟ್‌ನ ಪ್ರಸಕ್ತ ಪರಿಸ್ಥಿತಿ ಸೂಕ್ತ ಉದಾಹರಣೆಯಾಗಿದೆ.
ಇದರಿಂದಾಗಿ ಮಳೆ ನೀರಿನ ಸಹಜ ಹರಿವಿಗೆ ತೊಂದರೆಯಾಗಿ ನೀರು ಮಣ್ಣಿನೊಳಗೆ ಸೇರಿಕೊಂಡು ಬೇರೆ ಕಡೆ ಕೆಳ ಭಾಗದಲ್ಲಿ ಹೊರಗೆ ಹೋಗುವ ವೇಳೆ ಮಣ್ಣು ಸಡಿಲಗೊಂಡು ಭೂ ಕುಸಿತ ಉಂಟಾಗುತ್ತಿದೆ. ಇದರಿಂದಾಗಿಯೇ ಶಿರಾಢಿ ಘಾಟ್ ಭಾಗದಲ್ಲಿ ಉಂಟಾಗಿರುವ ಭೂ ಕುಸಿತ ನಿಲ್ಲುತ್ತಲೇ ಇಲ್ಲ.
ಎತ್ತಿನಹೊಳೆ ಯೋಜನೆಯ ಬಗ್ಗೆ ವಿಜ್ಞಾನಿಗಳು ನೀಡಿದ ವಾರ್ನಿಂಗ್ ನ್ನು ಲೆಕ್ಕಿಸದೇ, ಆದಷ್ಟು ಬೇಗ ಮುಗಿಸಲು ಹೊರಟಿರುವುದು, ಸರಕಾರ ಪ್ರಕೃತಿಯ ವಿರುದ್ದ ನಡೆಸಿರುವ ಯುದ್ದದಲ್ಲಿ ಸರಕಾರವನ್ನು ಪ್ರಕೃತಿ ತಲೆಕೆಳಗಾಗಿಸಿದೆ.