Connect with us

    LATEST NEWS

    ಗುಡ್ಡಕುಸಿತಗಳಿಗೆ ಕಾರಣ ಹುಡುಕಲು ತಜ್ಞರ ಸಮಿತಿ ರಚನೆ- ಸಚಿವ ಆರ್.ವಿ ದೇಶಪಾಂಡೆ

    ಗುಡ್ಡಕುಸಿತಗಳಿಗೆ ಕಾರಣ ಹುಡುಕಲು ತಜ್ಞರ ಸಮಿತಿ ರಚನೆ- ಸಚಿವ ಆರ್.ವಿ ದೇಶಪಾಂಡೆ

    ಮಂಗಳೂರು ಅಗಸ್ಟ್ 19: ಈ ಬಾರಿ ಸುರಿದ ಮಳೆಗೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗುಡ್ಡ ಕುಸಿತಗಳಿಗೆ ಕಾರಣವೇನು ಎನ್ನುವುದರ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ಚಿಂತಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

    ಮಂಗಳೂರಿನಲ್ಲಿ ಮಾತನಾಡಿದ ಅವರು ಈ ಬಾರಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದೆ. ಈ ಕುಸಿತದಿಂದಾಗಿ ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರೀ ನಷ್ಟ ಸಂಭವಿಸಿದೆ.

    ಶಿರಾಢಿಘಾಟ್, ಬಿಸಿಲೆಘಾಟ್ ಹಾಗೂ ಸಂಪಾಜೆ ಘಾಟ್ ಗಳಲ್ಲಿ ಈ ಕುಸಿತದ ಪರಿಣಾಮ ಹೆಚ್ಚಾಗಿದ್ದು, ಈ ಕುಸಿತಗಳಿಗೆ ಕಾರಣವೇನು ಎನ್ನುವುದರ ಕುರಿತು ಅಧ್ಯಯನ ನಡೆಸುವ ಅಗತ್ಯವಿದೆ ಎಂದರು. ಪ್ರತಿ ಬಾರಿ ಬೀಳುವ ಮಳೆ ಪ್ರಮಾಣದಷ್ಟೇ ಮಳೆ ಘಟ್ಟ ಪ್ರದೇಶಗಳಲ್ಲಿ ಬಿದ್ದಿದ್ದರೂ, ಈ ರೀತಿಯ ಅನಾಹುತಗಳಿಗೆ ಕಾರಣವೇನು ಎನ್ನುವುದರ ಬಗ್ಗೆ ತಜ್ಞರ ವರದಿ ಪಡೆದುಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಆದ ಈ ರೀತಿಯ ಅನಾಹುತಗಳಿಗೆ ಎತ್ತಿನಹೊಳೆ ಯೋಜನೆಯೇ ಪ್ರಮುಖ ಕಾರಣ ಎನ್ನುವ ಅಭಿಪ್ರಾಯಗಳನ್ನು ಪರಿಸರ ತಜ್ಞರು ವ್ಯಕ್ತಪಡಿಸುತ್ತಿದ್ದು, ಇದರ ಬಗ್ಗೆಯೂ ಅಧ್ಯಯನ ನಡೆಸಲಾಗುವುದು ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply