Connect with us

    LATEST NEWS

    ರಸ್ತೆ ಅಪಘಾತದಲ್ಲಿ ಮಿಸ್ ಕೇರಳ 2019ರ ವಿನ್ನರ್ ಅನ್ಸಿಕಬೀರ್, ರನ್ನರ್ ಅಫ್ ಅಂಜನಾ ಸಾವು

    ಕೊಚ್ಚಿ ನವೆಂಬರ್ 1: ಮಿಸ್ ಕೇರಳ 2019 ರ ಪ್ರಶಸ್ತಿ ವಿಜೇತೆ ಅನ್ಸಿ ಕಬೀರ್ ಹಾಗೂ ರನ್ನರ್ ಅಫ್ ಅಂಜನಾ ಶಾಜನ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.


    ಸೋಮವಾರ ನಸುಕಿನ 1 ಗಂಟೆ ಸುಮಾರಿಗೆ ಕೊಚ್ಚಿಯಲ್ಲಿ ಈ ದುರ್ಘಟನೆ ನಡೆದಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಎರ್ನಾಕುಲಂ ಬೈಪಾಸ್ ರಸ್ತೆಯಲ್ಲಿ ಹಾಲಿಡೇ ಇನ್ ಹೋಟೆಲ್ ಮುಂಭಾಗದಲ್ಲಿ ಅಪಘಾತಕ್ಕೀಡಾಗಿದೆ. ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರು ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದ ಹೇಳಲಾಗಿದೆ.


    ಕಾರಿನಲ್ಲಿ ನಾಲ್ಕು ಜನರಿದ್ದರು. ಜೊತೆಯಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ಚಿಕಿತ್ಸೆಗಾಗಿ ಎರ್ನಾಕುಲಂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅನ್ಸಿ ಕಬೀರ್ ತಿರುವನಂತಪುರಂನ ಅಟ್ಟಿಂಗಲ್‌ನ ಅಲಂಗೋಡ್‌ನವರು. ಅಂಜನಾ ಶಾಜನ್ ತ್ರಿಶೂರ್ ಮೂಲದವರು.

     

    Share Information
    Advertisement
    Click to comment

    You must be logged in to post a comment Login

    Leave a Reply