Connect with us

FILM

ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ…!!

Share Information

ಮುಂಬೈ : ಬಾಲಿವುಡ್ ಹಾಗೂ ಕ್ರಿಕೆಟ್ ನಲ್ಲಿ ಮತ್ತೊಂದು ಮದುವೆ ಸದ್ದು ಇದೀಗ ಜೊರಾಗಿದ್ದು, ಕ್ರಿಕೆಟಿಗ ಕರಾವಳಿಯ ಕೆ.ಎಲ್ ರಾಹುಲ್ ಹಾಗೂ ಕರಾವಳಿಯವರೆ ಆದ ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಜೋಡಿ ಹಸೆಮಣೆ ಏರಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಅಷ್ಟೇ ಅಲ್ಲ, ಮದುವೆ ದಿನಾಂಕದ ಜೊತೆ ಸ್ಥಳ ಕೂಡ ನಿಗದಿಯಾಗಿದೆ.


ಕಳೆದ ಮೂರುವರ್ಷಗಳಿಂದ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಡೆಟಿಂಗ್ ನಲ್ಲಿದ್ದರು, ನಟ ಸುನೀಲ್ ಶೆಟ್ಟಿ ಕೂಡ ಮಗಳ ಮದುವೆಯ ಸಕಲ ತಯಾರಿಯಲ್ಲಿದ್ದಾರೆ. ಮದುವೆಗೆ ಡೇಟ್ ಅಷ್ಟೇ ಫಿಕ್ಸ್ ಮಾಡಿರುವುದಲ್ಲ, ಸ್ಥಳ ಕೂಡ ಫಿಕ್ಸ್ ಮಾಡಿದ್ದಾರೆ.
ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆಯಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ.


ಇನ್ನೂ ಮಗಳ ಮದುವೆಯ ಬಗ್ಗೆ ಸುನೀಲ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಧರಿಸಿದ ತಕ್ಷಣ ನಾನು ಮದುವೆಗೆ ಒಪ್ಪಿಕೊಂಡೆ. ಆದರೆ ರಾಹುಲ್‌ಗೆ ಸದ್ಯ ಹಲವು ಪಂದ್ಯಗಳಿವೆ. ಅವರು ಏಷ್ಯಾಕಪ್, ವಿಶ್ವಕಪ್, ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಆಡಬೇಕಿದೆ. ಆ ಕೆಲಸಗಳಿಂದ ವಿರಾಮ ಸಿಕ್ಕ ಕೂಡಲೇ ಮದುವೆಯಾಗುತ್ತಾರೆ. ಏಕೆಂದರೆ ಮದುವೆ ಒಂದು ದಿನದಲ್ಲಿ ಆಗಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply