LATEST NEWS
ವಿಧ್ಯಾರ್ಥಿಗಳಿರುವಾಗಲೇ ತರಗತಿಗೆ ನುಗ್ಗಿದ ಭಾರಿ ಗಾತ್ರದ ಕಾಳಿಂಗ ಸರ್ಪ

ವಿಧ್ಯಾರ್ಥಿಗಳಿರುವಾಗಲೇ ತರಗತಿಗೆ ನುಗ್ಗಿದ ಭಾರಿ ಗಾತ್ರದ ಕಾಳಿಂಗ ಸರ್ಪ
ಉಡುಪಿ ಫೆಬ್ರವರಿ 1 ಶಾಲೆಯಲ್ಲಿ ವಿಧ್ಯಾರ್ಥಿಗಳಿರುವಾಗಲೇ ತರಗತಿಗೆ ಕಾಳಿಂಗ ಸರ್ಪವೊಂದು ನುಗ್ಗಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಬೈಂದೂರು ತಾಲೂಕು ವ್ಯಾಪ್ತಿಯ ಹೊಸಂಗಡಿಯಲ್ಲಿ ಈ ಘಟನೆ ನಡೆದಿದೆ. ಹೊಸಂಗಡಿಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗೆ ಭಾರಿ ಗಾತ್ರದ ಕಾಳಿಂಗ ಸರ್ಪ ನುಗ್ಗಿದೆ. ಈ ಸಂದರ್ಭದಲ್ಲಿ ತರಗತಿಯಲ್ಲಿದ್ದ ವಿಧ್ಯಾರ್ಥಿಗಳು ಕಾಳಿಂಗ ಸರ್ಪವನ್ನು ನೋಡಿ ಭಯಭೀತರಾಗಿ ಹೊರಗಡೆ ಓಡಿ ಬಂದಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಶಾಲೆ ಇರುವ ಹಿನ್ನಲೆಯಲ್ಲಿ ಕಾಳಿಂಗ ಸರ್ಪ ತರಗತಿಗೆ ಬಂದಿದೆ ಎಂದು ಹೇಳಲಾಗಿದೆ. ನಂತರ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು. ಸೆರೆ ಹಿಡಿದ ಕಾಳಿಂಗ ಮತ್ತೆ ಸುರಕ್ಷಿತವಾಗಿ ಕಾಡಿಗೆ ಬೀಡಲಾಗಿದೆ.