ಹೆಜಮಾಡಿ ಟೋಲ್ ಪ್ಲಾಜಾ ವಿರುದ್ದ ಫೆಬ್ರವರಿ 5 ರಂದು ಮೂಲ್ಕಿ ಬಂದ್

ಮಂಗಳೂರು ಫೆಬ್ರವರಿ 1: ಹೆಜಮಾಡಿ ಟೋಲ್ ಗೇಟ್ ನಲ್ಲಿ ಸ್ಥಳೀಯರಿಂದ ಬಲವಂತವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೆಬ್ರವರಿ 5 ರಂದು ಮುಲ್ಕಿ ಹೋಬಳಿ ಬಂದ್ ಗೆ ನಿರ್ಧರಿಸಲಾಗಿದೆ.

ಹೆಜಮಾಡಿ ಹಾಗೂ ಸುರತ್ಕಲ್ ಟೋಲ್ ನಿಂದ ಮೂಲ್ಕಿ ವಲಯ ಕಾರು ಚಾಲಕ ಮಾಲೀಕರಿಗೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಭಟನಾರ್ಥವಾಗಿ ಈ ಬಂದ್ ಆಚರಿಸಲಾಗುವುದು.

ಹೆಜಮಾಡಿ ಟೋಲ್ ವಸೂಲಾತಿಯಿಂದ ಕೇವಲ ಅರ್ಧ ಕಿಲೋಮೀಟರ್ ದೂರವಿರುವ ಮೂಲ್ಕಿ ಜನತೆಗೆ ಅನ್ಯಾಯವಾಗುತ್ತಿದ್ದು. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂಧಿಸಿಲ್ಲ ಎಂದು ಆರೋಪಿಸಲಾಗಿದೆ.

ಇನ್ನು ಈ ವಿಚಾರವಾಗಿ ಇಂದು ಸಭೆ ನಡೆಯಲಿದ್ದು, ಸಭೆಯಲ್ಲಿ ಸಂಸದರು, ಉಭಯ ಜಿಲ್ಲೆಗಳ ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸೂಕ್ತ ನಿರ್ಣಯ ಕೈಗೊಳ್ಳಲು ಸಭೆ ನಡೆಸಲಾಗುತ್ತಿದ್ದು, ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ಫೆಬ್ರವರಿ 5ರಂದು ಹೆಜಮಾಡಿ ಟೋಲ್ ವಿರುದ್ಧ ಜನಪ್ರತಿನಿಧಿಗಳ ನೇತೃತ್ವದಲ್ಲಿ ಹೆಜಮಾಡಿ ಟೋಲ್ ಕೇಂದ್ರಕ್ಕೆ ಪಾದಯಾತ್ರೆ ನಡೆಸಿ ಸತ್ಯಾಗ್ರಹ ನಡೆಸುವ ನಿರ್ಣಯ ಕೈಗೊಂಡಿದ್ದಾರೆ.

Facebook Comments

comments