ಬೆಂಗಳೂರಿನ ಅಕಾಶದಲ್ಲಿ ಸ್ಪೋಟಗೊಂಡ ಯುದ್ದ ವಿಮಾನ

ಬೆಂಗಳೂರು. ಫೆಬ್ರವರಿ 1: ಬೆಂಗಳೂರಿನ ಎಚ್‍ಎಎಲ್ ಏರ್‍ ಪೋರ್ಟ್ ಬಳಿ ಯುದ್ಧ ವಿಮಾನವೊಂದು ಪತನವಾಗಿರುವ ಘಟನೆ ನಡೆದಿದೆ.

ಮಿರಾಜ್ 2000 ಎನ್ನುವ ಯುದ್ಧ ವಿಮಾನ ಪತನವಾಗಿದ್ದು ಪೈಲಟ್ ತರಬೇತಿ ಹಾರಾಟದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ದುರ್ಘಟನೆಯಲ್ಲಿ ಪೈಲಟ್ ಮೃತಪಟ್ಟಿದ್ದು ಮತೋರ್ವ ಗಂಭೀರ ಗಾಯಗೊಂಡಿದ್ದಾನೆ.

ಗಾಯಗೊಂಡವರನ್ನು ಸ್ತಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ವಾಯುಸೇನೆಗೆ ಸೇರಿದ ಈ ಯುದ್ದ ವಿಮಾನ ಮಿರಾಜ್ 2000 ಹಾರಾಟವಾದ ಕೆಲವೇ ನಿಮಿಷದಲ್ಲಿ ಭಾರೀ ಸ್ಫೋಟಗೊಂಡು ಪತನಗೊಂಡಿದೆ.

ಪರಿಣಾಮ ದಟ್ಟವಾದ ಹೊಗೆ ಅಲ್ಲಿ ಆವರಿಸಿದೆ. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ.ಈ ಬಗ್ಗೆ ಸಮಗ್ರ ತನಿಖೆಗೆ ವಾಯುಸೇನೆ ಆದೇಶಿಸಿದೆ.

ವಿಡಿಯೋಗಾಗಿ..

Facebook Comments

comments